ಮಾಹಿತಿ ಇರುವಲ್ಲಿ ಹೋಗಲು

ಶವ ಸುಡೋದರ ಬಗ್ಗೆ ಬೈಬಲ್‌ ಏನ್‌ ಹೇಳುತ್ತೆ?

ಶವ ಸುಡೋದರ ಬಗ್ಗೆ ಬೈಬಲ್‌ ಏನ್‌ ಹೇಳುತ್ತೆ?

ಬೈಬಲ್‌ ಕೊಡೋ ಉತ್ತರ

 ಶವ ಸುಡೋದರ ಬಗ್ಗೆ ಬೈಬಲ್‌ನಲ್ಲಿ ನಿರ್ದಿಷ್ಟ ನಿರ್ದೇಶನ ಇಲ್ಲ. ಶವನ ಹೂಣಿಡಬೇಕು ಅಂತನೂ ಹೇಳಲ್ಲ, ಸುಡಬೇಕು ಅಂತನೂ ಹೇಳಲ್ಲ.

 ಆದ್ರೆ ಬೈಬಲ್‌ನಲ್ಲಿ ದೇವರ ನಂಬಿಗಸ್ತ ಸೇವಕರು ಸತ್ತುಹೋದವರನ್ನ ಸಮಾಧಿ ಮಾಡಿರೋ ಅನೇಕ ಉದಾಹರಣೆಗಳು ಇವೆ. ಅಬ್ರಹಾಮ ತನ್ನ ಹೆಂಡತಿ ಸಾರ ತೀರಿಕೊಂಡಾಗ ಅವಳನ್ನ ಸಮಾಧಿ ಮಾಡೋಕೆ ಒಂದು ಜಾಗ ಖರೀದಿ ಮಾಡಿದ. ಆ ಜಾಗಕ್ಕೋಸ್ಕರ ಎಷ್ಟು ದುಡ್ಡು ಕೊಡೋಕೂ ರೆಡಿ ಇದ್ದ.—ಆದಿಕಾಂಡ 23:2-20; 49:29-32.

 ದೇವರ ನಂಬಿಗಸ್ತ ಸೇವಕರು ಸತ್ತವರನ್ನ ಸುಟ್ಟಿರೋ ಉದಾಹರಣೆಗಳು ಕೂಡ ಬೈಬಲ್‌ನಲ್ಲಿ ಇವೆ. ಇಸ್ರಾಯೇಲ್ಯರ ರಾಜನಾದ ಸೌಲನನ್ನ ಮತ್ತು ಅವನ ಮೂವರು ಗಂಡು ಮಕ್ಕಳನ್ನ ಯುದ್ಧದಲ್ಲಿ ಶತ್ರುಗಳು ಸಾಯಿಸಿದ್ರು. ಅವ್ರ ಮೃತ ದೇಹಗಳನ್ನ ಶವಸಂಸ್ಕಾರ ಮಾಡ್ಡೆ ಇಡೋ ಮೂಲಕ ಅದಕ್ಕೆ ಅವಮಾನ ಮಾಡಿದ್ರು. ಇಸ್ರಾಯೇಲ್ಯರ ಸೈನಿಕರಿಗೆ ಇದು ಗೊತ್ತಾದಾಗ ಅವರು ಸೌಲ ಮತ್ತು ಅವನ ಮಕ್ಕಳ ದೇಹವನ್ನ ಸುಟ್ರು, ಆಮೇಲೆ ಅವ್ರ ಮೂಳೆಗಳನ್ನ ಹೂಣಿಟ್ರು. (1 ಸಮುವೇಲ 31:8-13) ಹೀಗೆ ಮಾಡಿದ್ದಕ್ಕೆ ಬೈಬಲ್‌ ಈ ಸೈನಿಕರನ್ನ ಖಂಡಿಸಲಿಲ್ಲ, ಬದಲಿಗೆ ಅವರು ಮಾಡಿದ್ದು ಒಳ್ಳೇ ವಿಷ್ಯ ಅಂತ ಹೇಳುತ್ತೆ.—2 ಸಮುವೇಲ 2:4-6.

ಶವ ಸುಡೋದ್ರ ಬಗ್ಗೆ ಇರೋ ತಪ್ಪಾಭಿಪ್ರಾಯಗಳು

 ತಪ್ಪಾಭಿಪ್ರಾಯ: ಶವ ಸುಟ್ಟರೆ ಆ ದೇಹಕ್ಕೆ ಗೌರವ ಕೊಟ್ಟಂಗೆ ಆಗಲ್ಲ.

 ನಿಜ: ಬೈಬಲ್‌ ನಾವು ಸತ್ತ ಮೇಲೆ ಮಣ್ಣಲ್ಲಿ ಮಣ್ಣಾಗಿಬಿಡ್ತೀವಿ ಅಂತ ಹೇಳುತ್ತೆ. ನಮ್ಮೆಲ್ಲರಿಗೆ ಗೊತ್ತಿರೋ ಹಾಗೆ ಶವನ ಹೂಣಿಟ್ಟಾಗ ನಿಧಾನವಾಗಿ ಕೊಳೆತು-ಕೊಳೆತು ಮಣ್ಣಾಗಿಬಿಡುತ್ತೆ. (ಆದಿಕಾಂಡ 3:19) ಆದ್ರೆ ಸುಟ್ಟಾಗ ಬೂದಿಯಾಗಿ ಬೇಗ ಮಣ್ಣಲ್ಲಿ ಮಣ್ಣಾಗಿಬಿಡುತ್ತೆ.

 ತಪ್ಪಾಭಿಪ್ರಾಯ: ಬೈಬಲ್‌ ಕಾಲದಲ್ಲಿ ದೇವರ ವಿರುದ್ಧ ತಿರುಗಿ ಬಿದ್ದವರ ದೇಹವನ್ನ ಮಾತ್ರ ಸುಡ್ತಿದ್ರು.

 ನಿಜ: ದೇವರ ವಿರುದ್ಧ ತಿರುಗಿ ಬಿದ್ದವರ ದೇಹಗಳನ್ನ ಸುಡಲಾಯ್ತು ಅಂತ ಬೈಬಲ್‌ ಹೇಳುತ್ತೆ. ಉದಾಹರಣೆಗೆ ಆಕಾನ ಮತ್ತು ಅವನ ಕುಟುಂಬದವರು ತಪ್ಪು ಮಾಡಿದಾಗ ಅವ್ರ ದೇಹಗಳನ್ನ ಬೆಂಕಿಯಲ್ಲಿ ಹಾಕಿ ಸುಡಲಾಯ್ತು. (ಯೆಹೋಶುವ 7:25) ಆದ್ರೆ ಹೀಗೇ ಮಾಡಬೇಕು ಅನ್ನೋ ನಿಯಮ ಇರಲಿಲ್ಲ. (ಧರ್ಮೋಪದೇಶಕಾಂಡ 21:22, 23) ಈಗಾಗಲೇ ನೋಡಿದ ಹಾಗೆ ರಾಜ ಸೌಲನ ಮಗ ಯೋನಾತಾನನ ತರ ಕೆಲವು ನಂಬಿಗಸ್ತ ಜನ್ರ ದೇಹಗಳನ್ನ ಸತ್ತ ಮೇಲೆ ಸುಡಲಾಯ್ತು.

 ತಪ್ಪಾಭಿಪ್ರಾಯ: ಶವವನ್ನ ಸುಟ್ಟರೆ ದೇವರು ಅವ್ರನ್ನ ಮತ್ತೆ ಜೀವಂತವಾಗಿ ಎಬ್ಬಿಸಲ್ಲ.

 ನಿಜ: ಜನ ಹೇಗೇ ಸತ್ತು ಹೋಗಿದ್ರೂ ದೇವರು ಅವ್ರನ್ನ ಮತ್ತೆ ಜೀವಂತವಾಗಿ ಎಬ್ಬಿಸ್ತಾನೆ. ಅವ್ರ ದೇಹವನ್ನ ಸಮಾಧಿ ಮಾಡಿರಲಿ, ಸುಟ್ಟಿರಲಿ, ಅವ್ರು ಸಮುದ್ರದಲ್ಲಿ ಮುಳುಗಿ ಸತ್ತು ಹೋಗಿರಲಿ, ಕಾಡು ಪ್ರಾಣಿಗಳು ತಿಂದಿರಲಿ ದೇವರಿಗೆ ಅವ್ರನ್ನ ಜೀವಂತವಾಗಿ ಎಬ್ಬಿಸೋ ಶಕ್ತಿ ಇದೆ. (ಪ್ರಕಟನೆ 20:13) ಸರ್ವಶಕ್ತ ದೇವರಿಗೆ ಸತ್ತು ಹೋಗಿರೋ ವ್ಯಕ್ತಿಗೆ ಹೊಸ ದೇಹ ಕೊಡೋದು ಅಷ್ಟೇನು ಕಷ್ಟದ ಕೆಲಸ ಅಲ್ಲ.—1 ಕೊರಿಂಥ 15:35, 38.