ಮಾಹಿತಿ ಇರುವಲ್ಲಿ ಹೋಗಲು

ದಿನದ ಬೈಬಲ್‌ ವಚನ

ದಿನದ ಬೈಬಲ್‌ ವಚನ

ದಿನದ ವಚನ ಓದಿ ಚರ್ಚಿಸೋಣ ಪ್ರಕಾಶನದಲ್ಲಿ ಪ್ರತಿ ದಿನಕ್ಕಾಗಿ ಒಂದು ವಚನ ಹಾಗೂ ಅದಕ್ಕೆ ಸಂಬಂಧಿಸಿದ ವಿವರಣೆ ಇರುತ್ತೆ. ಈ ಪ್ರಕಾಶನವು ಬೈಬಲ್‌ ಆಧಾರಿತ ವಿಷಯಗಳ ಮೂಲಕ ನಮ್ಮನ್ನು ಪ್ರೋತ್ಸಾಹಿಸುತ್ತಾ, ಸಕಾರಾತ್ಮಕ ಯೋಚನೆಗಳೊಂದಿಗೆ ಪ್ರತಿ ದಿನವನ್ನು ಆರಂಭಿಸಲು ನಮಗೆ ಸಹಾಯ ಮಾಡುತ್ತೆ.

ಇದನ್ನು ಪ್ರತಿದಿನ ಯಾವ ಸಮಯದಲ್ಲಿ ಬೇಕಾದರೂ ಓದಬಹುದು, ಆದರೆ ಬೆಳಗ್ಗೆ ಓದುವುದು ಹೆಚ್ಚು ಪ್ರಯೋಜನಕರ ಅಂತ ಅನೇಕರು ಅನುಭವದಿಂದ ತಿಳಿದಿದ್ದಾರೆ. ಯಾಕಂದ್ರೆ ಬೆಳಗ್ಗೆ ಓದಿದರೆ ಅದರ ಬಗ್ಗೆ ಇಡೀ ದಿನ ಯೋಚಿಸುತ್ತಾ ಇರಬಹುದು. ನೀವು ಕುಟುಂಬದ ಜೊತೆ ಇರೋದಾದ್ರೆ, ದಿನದ ವಚನವನ್ನು ಒಟ್ಟಿಗೆ ಚರ್ಚಿಸುವುದು ಹೆಚ್ಚು ಪ್ರಯೋಜನ ತರುತ್ತೆ.

ನೀವು ದಿನದ ವಚನವನ್ನು ವಾಚ್‌ಟವರ್‌ ಆನ್‌ಲೈನ್‌ ಲೈಬ್ರರಿ ಯಲ್ಲಿ ಓದಬಹುದು ಅಥವಾ ಆ ಕಿರುಪುಸ್ತಕದ PDF ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.