ಮಾಹಿತಿ ಇರುವಲ್ಲಿ ಹೋಗಲು

ಮರೋನಿ ನದಿಯಲ್ಲೊಂದು ಪ್ರಯಾಣ

ಮರೋನಿ ನದಿಯಲ್ಲೊಂದು ಪ್ರಯಾಣ

ದಕ್ಷಿಣ ಅಮೆರಿಕಾದ ಅಮೆಜಾನ್‌ ಮಳೆಕಾಡಿನಲ್ಲಿ ವಿವಿಧ ಕುಲ, ಜನಾಂಗ ಮತ್ತು ಭಾಷೆಗಳವರು ವಾಸಿಸುತ್ತಾರೆ. ಇವರೆಲ್ಲ ಜನಜಂಗುಳಿಯ ಪಟ್ಟಣದಿಂದ ತುಂಬ ದೂರ ಇದ್ದಾರೆ. ಜುಲೈ 2017 ರಲ್ಲಿ 13 ಜನ್ರಿರೋ ಯೆಹೋವನ ಸಾಕ್ಷಿಗಳ ಒಂದು ಗುಂಪು ಮರೋನಿ ನದಿ ಮತ್ತು ಅದ್ರ ಪೂರ್ವ ಉಪನದಿಗಳ ಮೂಲಕ ಫ್ರೆಂಚ್‌ ಗಯಾನಕ್ಕೆ ಪ್ರಯಾಣ ಬೆಳೆಸಿದ್ರು. ಆ ನದಿ ಹತ್ರ ಇರೋ ಜನ್ರಿಗೆ ಬೈಬಲ್‌ನಲ್ಲಿರೋ ನಿರೀಕ್ಷೆಯ ಸಂದೇಶವನ್ನ ತಲಪಿಸೋದೇ ಅವರ ಗುರಿ.

ಪ್ರಯಾಣಕ್ಕೆ ತಯಾರಿ

12 ದಿನಗಳ ಈ ಪ್ರಯಾಣಕ್ಕಾಗಿ ಒಂದು ತಿಂಗಳ ಮುಂಚೆನೇ ಪೂರ್ವ ಸಿದ್ಧತೆ ಮಾಡ್ಕೊಳ್ಳೋಕೆ ಎಲ್ಲರು ಸೇರಿ ಬಂದ್ರು. ವಿನೆಸ್ಲೇ ಹೇಳ್ತಾರೆ “ನಾವು ಆ ಸ್ಥಳದ ಬಗ್ಗೆ, ಅದ್ರ ಇತಿಹಾಸದ ಬಗ್ಗೆ ಮತ್ತು ಪ್ರಯಾಣಕ್ಕಾಗಿ ನಾವು ಮಾಡಬೇಕಾದ ಸಿದ್ಧತೆ ಬಗ್ಗೆ ತಿಳ್ಕೊಂಡ್ವಿ.” ಸೊಳ್ಳೆ ಪರದೆ ಮತ್ತು ಉಯ್ಯಾಲೆ ಹಾಕೋಕೆ ನೀರು ಒಳಗೆ ಹೋಗದೆ ಇರೋ ಒಂದೊಂದು ಡಬ್ಬವನ್ನ ಎಲ್ಲರಿಗೂ ಕೊಡಲಾಯ್ತು. ಪ್ರಯಾಣಕ್ಕಾಗಿ ಎರಡು ವಿಮಾನ ಹತ್ತಬೇಕಿತ್ತು ಮತ್ತು ಚಿಕ್ಕ ಬೋಟ್‌ಗಳಲ್ಲಿ ತುಂಬ ಗಂಟೆಗಳ ಕಾಲ ಪ್ರಯಾಣಿಸಬೇಕಿತ್ತು.

ಕ್ಲಾಡ್‌ ಮತ್ತು ಲಿಸೆಟ್‌

ಈ ಪ್ರಯಾಣದಲ್ಲಿ ಭಾಗವಹಿಸೋ ಆಮಂತ್ರಣ ಸಿಕ್ಕಿದವರಿಗೆ ಹೇಗೆ ಅನಿಸ್ತು? 60 ರ ಆಸುಪಾಸಿನಲ್ಲಿರೋ ಕ್ಲಾಡ್‌ ಮತ್ತು ಲಿಸೆಟ್‌ ಕೂಡಲೇ ಈ ಆಮಂತ್ರಣವನ್ನ ಸ್ವೀಕರಿಸಿದ್ರು. ಕ್ಲಾಡ್‌ ಹೀಗಂದ್ರು: “ನನ್ಗೆ ತುಂಬ ಖುಷಿ ಆಯ್ತು, ಆದ್ರೆ ಸ್ವಲ್ಪ ಹೆದರಿದೆ. ಯಾಕಂದ್ರೆ ಅಲ್ಲಿನ ಅಪಾಯಕರ ನೀರಿನ ತೊರೆಗಳ ಬಗ್ಗೆ ಕೇಳಿದ್ದೆ.” ಲಿಸೆಟ್‌ ಅವ್ರಿಗೆ ಅವ್ರದೇ ಆದ ಚಿಂತೆ ಇತ್ತು. ಅವ್ರು ಹೀಗಂದ್ರು: “ನಾನು ಹೇಗಪ್ಪ ಅಮೆರಿಂಡಿಯನ್‌ ಭಾಷೆಯಲ್ಲಿ ಮಾತಾಡೋದು ಅನ್ನೋ ಚಿಂತೆ ಆಗ್ತಿತ್ತು.”

ಈ ಪ್ರಯಾಣದಲ್ಲಿದ್ದ ಮೈಕಲ್‌ಗೂ ಹೀಗೆ ಅನಿಸ್ತು. ಅವ್ರು ಹೀಗಂದ್ರು: “ವಯನಾ ಬುಡಕಟ್ಟಿನ ಜನ್ರ ಬಗ್ಗೆ ನಮ್ಗೆ ಅಷ್ಟೇನು ಗೊತ್ತಿಲ್ಲ. ಹಾಗಾಗಿ ನಾನು ಇಂಟರ್ನೆಟ್‌ನಲ್ಲಿ ಅವ್ರ ಭಾಷೆಯ ಕೆಲವು ಪದಗಳನ್ನ ಮತ್ತು ವಂದಿಸೋ ರೀತಿಯನ್ನ ನಾನು ತಿಳ್ಕೊಂಡೆ.”

ಈ ಪ್ರಯಾಣದಲ್ಲಿದ್ದ ಶೆರ್ಲಿ ಮತ್ತು ಜೋಹಾನ್‌, ನದಿಗಳ ಹತ್ರ ಇರೋ ಜನ್ರು ಮಾತಾಡೋ ಭಾಷೆಯನ್ನ ಲಿಸ್ಟ್‌ ಮಾಡಿದ್ರು. ಶೆರ್ಲಿ ಹೀಗಂದ್ರು: “ಲಿಸ್ಟ್‌ನಲ್ಲಿದ್ದ ಆದಷ್ಟು ಹೆಚ್ಚು ಭಾಷೆಗಳಲ್ಲಿ jw.orgಯಿಂದ ವಿಡಿಯೋಗಳನ್ನ ಡೌನ್‌ಲೋಡ್‌ ಮಾಡ್ಕೊಂಡ್ವಿ. ವಯನಾದಲ್ಲಿ ಮಾತಾಡೋ ಭಾಷೆಯ ಪುಸ್ತಕವನ್ನ ತಗೊಂಡ್ವಿ.”

ಅಮೆರಿಂಡಿಯನ್‌ ಜನ್ರಿದ್ದ ಸ್ಥಳಕ್ಕೆ ತಲುಪಿದ್ದು

ಮಂಗಳವಾರ ಜುಲೈ 4 ರಂದು, ಈ ಚಿಕ್ಕ ಗುಂಪು ಸೇಂಟ್‌-ಲಾರೆಂಟ್‌ ಡು ಮರೋನಿಯಿಂದ ವಿಮಾನ ಹತ್ತಿ ಫ್ರೆಂಚ್‌ ಗಯಾನಾದ ಸಣ್ಣ ಪಟ್ಟವಾದ ಮಾರಿಪಸೈಲಾಗೆ ಬಂದು ತಲುಪಿತ್ತು.

ಈ ಗುಂಪಿನವರು ನಾಲ್ಕು ದಿನದ ತನಕ ಮೋಟರ್‌ ಬೋಟ್‌ನಲ್ಲಿ ಪ್ರಯಾಣಿಸ್ತಾ ಮರೋನಿ ನದಿ ದಡದಲ್ಲಿ ವಾಸಿಸೋ ಜನ್ರಿಗೆ ಮತ್ತು ಅಲ್ಲಿರೋ ಹಳ್ಳಿಗಳಿಗೆ ಸಾರಿದ್ರು. ಈ ಗುಂಪಿನಲ್ಲಿದ್ದ ರೋಲ್ಯಾಂಡ್‌ ಹೀಗಂದ್ರು: “ಅಮೆರಿಂಡಿಯನ್‌ ಜನ್ರು ಆಧ್ಯಾತ್ಮಿಕ ವಿಷ್ಯಗಳಿಗೆ ತುಂಬ ಆಸಕ್ತಿ ತೋರಿಸಿದ್ರು. ಅವರು ತುಂಬ ಪ್ರಶ್ನೆಗಳನ್ನ ಕೇಳಿದ್ರು. ಅಲ್ಲದೆ ಕೆಲವ್ರು ಬೈಬಲ್‌ ಅಧ್ಯಯನಕ್ಕೆ ಒಪ್ಕೊಂಡ್ರು.”

ಒಂದು ಹಳ್ಳಿಯಲ್ಲಿ ಜೋಹಾನ್‌ ಮತ್ತು ಶೆರ್ಲಿ, ಯುವ ದಂಪತಿಯನ್ನ ಭೇಟಿಯಾದ್ರು. ಕೆಲವು ದಿನಗಳ ಹಿಂದೆ ಈ ದಂಪತಿಯ ಸಂಬಂಧಿಕರಲ್ಲಿ ಒಬ್ಬಳು ಆತ್ಮಹತ್ಯೆ ಮಾಡ್ಕೊಂಡಿದ್ದಳು. ಈ ಭೇಟಿ ಬಗ್ಗೆ ಜೋಹಾನ್‌ ಹೀಗಂದ್ರು: “ನಾವು ಅವ್ರಿಗೆ jw ಪ್ರಸಾರದಿಂದ ಆ ನೇಟಿವ್‌ ಅಮೆರಿಕನ್‌ ಫೈಂಡಸ್‌ ಹಿಸ್‌ ಕ್ರಿಯೇಟರ್‌ (ಇಂಗ್ಲಿಷ್‌) ಅನ್ನೋ ವಿಡಿಯೋವನ್ನ ತೋರಿಸಿದ್ವಿ. ಈ ವಿಡಿಯೋ ಅವ್ರ ಹೃದಯ ಮುಟ್ತು. ನಾವು ಅವರೊಟ್ಟಿಗೆ ಯಾವಾಗ್ಲೂ ಸಂಪರ್ಕದಲ್ಲಿ ಇರಬೇಕಂತ ಅವ್ರ ಇ-ಮೇಲ್‌ ಐಡಿಯನ್ನ ಕೊಟ್ರು.”

ನದಿಯಲ್ಲಿ ತುಂಬ ದೂರ ಭೇಟಿ ಮಾಡಿದ ಸ್ಥಳ ಅಂದ್ರೆ ಆಂಟಕ್ಯೂಮ್‌ ಪಟಾ. ತುಂಬ ಸುಸ್ತಾಗಿದ್ದ ಈ ಯೆಹೋವನ ಸಾಕ್ಷಿಗಳಿಗೆ ಅಲ್ಲಿನ ಹಳ್ಳಿಯ ಮುಖ್ಯಸ್ಥ ಸಾರ್ವಜನಿಕ ಸ್ಥಳದಲ್ಲಿ ಉಯ್ಯಾಲೆ ಹಾಕೋಳೋಕೆ ಅವಕಾಶ ಕೊಟ್ಟ. ಅಲ್ಲಿನವರು ನದಿಯಲ್ಲಿ ಸ್ನಾನ ಮಾಡ್ತಿದ್ರು. ಹಾಗೇ ಇವ್ರು ಸ್ನಾನ ಮಾಡಿದ್ರು.

ಅಲ್ಲಿಂದ ಈ ಗುಂಪು ಟ್ವೆನ್ಕೆ ಅನ್ನೋ ಹಳ್ಳಿಗೆ ಹೋಯ್ತು. ಅಲ್ಲಿ ವಾಸಿಸೋರು ತಮ್ಮ ಸ್ವಂತದವರನ್ನ ಕಳ್ಕೊಂಡ ದುಃಖದಲ್ಲಿದ್ರು. ಈ ಪ್ರಯಾಣವನ್ನ ನೋಡ್ಕೊಳ್ತಿದ್ದ ಎರಿಕ್‌ ಹೀಗಂದ್ರು: “ಅಲ್ಲಿನ ಹಿರಿಯ ವ್ಯಕ್ತಿ ಅಂದ್ರೆ ಕುಲದ ಮುಖ್ಯಸ್ಥ ಹಳ್ಳಿಯಲ್ಲಿ ದುಃಖದಲ್ಲಿದವ್ರಿಗೆ ಸಮಾಧಾನ ಹೇಳೋಕೆ ಅವಕಾಶ ಕೊಟ್ರು. ನಾವು ವಯನಾ ಭಾಷೆಯಲ್ಲಿ ಬೈಬಲ್‌ ಓದ್ತಿರೋದನ್ನ ನೋಡಿ ಆ ಮುಖ್ಯಸ್ಥ ಮತ್ತು ಅವ್ರ ಕುಟುಂಬದವರು ನಮ್ಮನ್ನ ಶ್ಲಾಘಿಸಿದ್ರು. ಪುನರುತ್ಥಾನದ ನಿರೀಕ್ಷೆ ಬಗ್ಗೆ ಇರೋ ವಿಡಿಯೋಗಳನ್ನ ತೋರಿಸಿದ್ವಿ.”

ಗ್ರಾಂಡ್‌-ಸಾಂತಿ ಮತ್ತು ಅಪಟೌ ತನಕ

ಮುಂದಿನ ಪ್ರಯಾಣ ಮಾರಿಪಸೈಲಾದಿಂದ ಗ್ರಾಂಡ್‌-ಸಾಂತಿಯ ಚಿಕ್ಕ ಪಟ್ಟಣಕ್ಕಿತ್ತು. ಇಲ್ಲಿ ಹೋಗೋಕೆ ವಿಮಾನದಲ್ಲಿ ಅರ್ಧ ಘಂಟೆ ಬೇಕಿತ್ತು. ಈ ಪ್ರಯಾಣಿಕರು ಮಂಗಳವಾರ, ಬುಧವಾರ ಅಲ್ಲಿನ ಸ್ಥಳೀಯರಿಗೆ ಬೈಬಲ್‌ ಸಂದೇಶವನ್ನ ತಿಳಿಸಿದ್ರು. ಗುರುವಾರ ಈ ಸಾಕ್ಷಿಗಳು ಮಾರೋನಿ ನದಿಯಲ್ಲಿರೋ ಅಪಟೌ ಹಳ್ಳಿಗೆ ಪ್ರಯಾಣ ಆರಂಭಿಸಿದ್ರು. ಇದು ಐದುವರೆ ಘಂಟೆಯ ಪ್ರಯಾಣವಾಗಿತ್ತು.

ಮರೋನಿ ನದಿ ಮತ್ತು ಅಮೆಜಾನ್‌ ಮಳೆಕಾಡಿನ ನಡುವೆ ಮಾರಿಪಸೈಲಾ ಮತ್ತು ಗ್ರಾಂಡ್‌-ಸಾಂತಿ

ಪ್ರಯಾಣದ ಕೊನೆ ದಿನದ ಹಿಂದಿನ ದಿನ ಮಾರೋನಿಯ ಕಾಡಿನಲ್ಲಿರೋ ಹಳ್ಳಿಗೆ ಭೇಟಿ ಮಾಡಿದ್ರು. ಇಲ್ಲಿರೋರು ಆಫ್ರಿಕದವರು. ಇವ್ರನ್ನ ಸುರಿನೇಮ್‌ ದೇಶದ ಒಂದು ಕಾಲೋನಿಯಿಂದ ದಕ್ಷಿಣ ಅಮೆರಿಕಕ್ಕೆ ಗುಲಾಮರನ್ನಾಗಿ ಕರ್ಕೊಂಡು ಬರಲಾಗಿತ್ತು. ಈ ಯೆಹೋವನ ಸಾಕ್ಷಿಗಳು ಅಲ್ಲಿರೋ ಎಲ್ಲರನ್ನ ಕೂಟಕ್ಕೆ ಆಮಂತ್ರಿಸಿದ್ರು. ಅದಕ್ಕಾಗಿ ವಿಶೇಷ ಕಾರ್ಯಕ್ರಮಕ್ಕೆ ಹಾಕೋ ಟೆಂಟನ್ನು ಹಾಕಲಾಗಿತ್ತು. ಇದ್ರ ಬಗ್ಗೆ ಕ್ಲಾಡ್‌ ಹೀಗಂದ್ರು: “ತುಂಬ ಜನ ಹಾಜರಾದದ್ದನ್ನ ನೋಡಿ ನಮ್ಮ ಹೃದಯ ಖುಷಿಯಿಂದ ಕುಣಿದಾಡಿತ್ತು.” ಮೊದಲ ಸಲ ಈ ತರದ ಪ್ರಯಾಣದಲ್ಲಿ ಭಾಗವಹಿಸಿದ ಕಾರ್ಸ್ಟನ್‌ ಹೀಗೆ ಹೇಳ್ತಾರೆ: “ಬೆಳಿಗ್ಗೆ ಅಷ್ಟೇ ಅವರಿಗೆಲ್ಲ ಕೂಟಕ್ಕೆ ಆಮಂತ್ರಣ ಕೊಟ್ಟಿದ್ವಿ!” ಇವರು ಸಾರ್ವಜನಿಕ ಭಾಷಣವನ್ನ ಆಕುನ್‌ ಭಾಷೆಯಲ್ಲಿ ಕೊಟ್ರು. ಅದ್ರ ಮುಖ್ಯ ವಿಷ್ಯ, “ಇರುವುದು ಈ ಜೀವಿತ ಮಾತ್ರವೋ?” ಎಂದಾಗಿತ್ತು. ಬೇರೆ-ಬೇರೆ ಹಳ್ಳಿಗಳಿಂದ ತೊಂಬತ್ತೊಂದು ಜನ ಈ ಕೂಟಕ್ಕೆ ಹಾಜರಾದ್ರು.

“ನಾವು ಪುನಃ ಅಲ್ಲಿಗೆ ಹೋಗೋಕೆ ತಯಾರಿದ್ದೇವೆ!”

ಕೊನೆಗೆ ಸೇಂಟ್‌-ಲಾರೆಂಟ್‌ ಡು ಮರೋನಿಯಿಂದ ಈ ಪ್ರಯಾಣಿಕರು ಹಿಂದಿರುಗಿದ್ರು. ಅವ್ರಿಗೆ ತುಂಬ ಖುಷಿ ಆಯ್ತು. ಅಲ್ಲಿನ ಜನ್ರ ಪ್ರತಿಕ್ರಿಯೆ ನೋಡಿ ಅಂದ್ರೆ ಯೆಹೋವನ ಸಾಕ್ಷಿಗಳ ಪ್ರಕಾಶನಗಳನ್ನು ತಗೊಂಡಿರೋದನ್ನ ಮತ್ತು ಡಜನ್‌ಗಟ್ಟಲೆ ವಿಡಿಯೋಗಳನ್ನು ವಿಕ್ಷಿಸಿರೋದನ್ನ ನೋಡಿ ಅವ್ರಿಗೆ ಆಶ್ಚರ್ಯ ಆಯ್ತು.

ಲಿಸೆಟ್‌ ಹೀಗಂದ್ರು: “ಈ ಪ್ರಯಾಣ ಮಾಡಿ ನನ್ಗೆ ಎಷ್ಟು ಖುಷಿ ಆಯ್ತು ಅಂತ ಮಾತಲ್ಲಿ ಹೇಳೋಕಾಗ್ತಿಲ್ಲ.” ಸಿಂಡಿ ಹೀಗೆ ಒಪ್ಕೊಂಡ್ರು: “ಪುನಃ ಇನ್ನೊಂದು ಅವಕಾಶ ಸಿಕ್ಕಿದ್ರೆ ಹೋಗೋಕೆ ತುದಿಗಾಲಲ್ಲಿ ನಿಂತಿದ್ದೀನಿ. ಇದು ಹೇಗಿರುತ್ತೆ ಅಂತ ನೀವೇ ಅನುಭವಿಸಿ ನೋಡಬೇಕು.”

ಈ ಪ್ರಯಾಣಿಕರಲ್ಲಿ ಕೆಲವ್ರಿಗೆ ಮತ್ತೆ ಅಲ್ಲಿ ಹೋಗೋಕೆ ಆಸೆ ಇದೆ. ಮೈಕೆಲ್‌ ಅಂತಾರೆ: “ನಾವು ಪುನಃ ಅಲ್ಲಿಗೆ ಹೋಗೋಕೆ ತಯಾರಿದ್ದೇವೆ!” ಸೇಂಟ್‌-ಲಾರೆಂಟ್‌ ಡು ಮರೋನಿಗೆ ವಿನೆಸ್ಲೇ ಹೋಗಿದ್ದಾರೆ. ಕ್ಲಾಡ್‌ ಮತ್ತೆ ಲಿಸೆಟ್‌ ತಮ್ಮ 60 ವಯಸ್ಸಿನಲ್ಲೂ ಅಪಟೌಗೆ ಹೋಗೋಕೆ ನಿರ್ಧರಿಸಿದ್ದಾರೆ.