ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇದನ್ನ ಮಾಡಿ ನೋಡಿ!

ಇದನ್ನ ಮಾಡಿ ನೋಡಿ!

“ಆರಾಧನಾ ಗೀತೆಗಳನ್ನ” ಬಾಯಿಪಾಠ ಮಾಡಿ

“ನಾನು ಬೇಜಾರಾಗಿದ್ದಾಗ, ಕುಗ್ಗಿಹೋದಾಗ ಯೆಹೋವ ನನ್ನನ್ನ ಬ್ರಾಡ್‌ಕಾಸ್ಟಿಂಗ್‌ ಹಾಡುಗಳಿಂದ ಹುರಿದುಂಬಿಸ್ತಾನೆ. “—ಲಾರೆನ್‌, ಅಮೆರಿಕ.

ಕ್ರೈಸ್ತರಾದ ನಾವು ಯೆಹೋವನನ್ನ ಹೊಗಳೋಕೆ “ಆರಾಧನಾ ಗೀತೆಗಳನ್ನ” ಹಾಡ್ತೀವಿ. (ಕೊಲೊ. 3:16) ಈ ಹಾಡುಗಳನ್ನ ಬಾಯಿಪಾಠ ಮಾಡಿದ್ರೆ, ಗೀತೆ ಪುಸ್ತಕ ಮತ್ತು ಫೋನ್‌ ಇಲ್ಲದೇ ಇರುವಾಗ್ಲೂ ಹಾಡೋಕೆ ಆಗುತ್ತೆ. ಆ ಗೀತೆಗಳನ್ನ ಬಾಯಿಪಾಠ ಮಾಡಿ ನೆನಪಲ್ಲಿ ಇಟ್ಕೊಳ್ಳೋಕೆ ಏನು ಮಾಡಬಹುದು?

  • ಹಾಡಲ್ಲಿರೋ ಪದಗಳ ಅರ್ಥನ ಚೆನ್ನಾಗಿ ತಿಳ್ಕೊಳ್ಳಿ. ನೀವು ಒಂದು ಮಾಹಿತಿ ಬಗ್ಗೆ ಚೆನ್ನಾಗಿ ಅರ್ಥ ಮಾಡ್ಕೊಂಡಾಗ್ಲೇ ಅದು ನೆನಪಲ್ಲಿ ಉಳಿಯೋದು. ನಮ್ಮ ಬ್ರಾಡ್‌ಕಾಸ್ಟಿಂಗ್‌ ಹಾಡುಗಳ ಮತ್ತು ಮಕ್ಕಳಿಗಾಗಿರೋ ಹಾಡುಗಳ ಸಾಲುಗಳು jw.orgನಲ್ಲಿ ಸಿಗುತ್ತೆ. ನಮ್ಮ ವೆಬ್‌ಸೈಟಲ್ಲಿ ಲೈಬ್ರರಿ ಅನ್ನೋ ಟ್ಯಾಬಿಗೆ ಹೋಗಿ ಆಮೇಲೆ ಸಂಗೀತ ಅನ್ನೋ ಟ್ಯಾಬ್‌ ಒತ್ತಿ.

  • ಹಾಡಿನ ಸಾಲುಗಳನ್ನ ಬರೀರಿ. ಹೀಗೆ ಮಾಡಿದಾಗ ಆ ಸಾಲುಗಳು ನಿಮ್ಮ ಮನಸ್ಸಲ್ಲಿ ಉಳ್ಕೊಳ್ಳುತ್ತೆ.—ಧರ್ಮೋ. 17:18.

  • ಪ್ರ್ಯಾಕ್ಟೀಸ್‌ ಮಾಡಿ. ಪದೇಪದೇ ಸಾಲುಗಳನ್ನ ಓದಿ ಅಥವಾ ಹಾಡಿ.

  • ಎಷ್ಟು ನೆನಪಿದೆ ಅಂತ ಪರೀಕ್ಷಿಸಿ. ನೀವು ಸಾಲುಗಳನ್ನ ನೋಡದೇ ಹಾಡೋಕೆ ಪ್ರಯತ್ನಿಸಿ. ಆಗ ಎಷ್ಟು ನೆನಪಿಟ್ಕೊಂಡಿದ್ದೀರಾ ಅಂತ ಗೊತ್ತಾಗುತ್ತೆ.