ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರಿಗೆ ನಿಮ್ಮ ಬಗ್ಗೆ ಕಾಳಜಿ ಇದೆ.

ದೇವರಿಗೆ ನಿಮ್ಮ ಬಗ್ಗೆ ಕಾಳಜಿ ಇದೆ.

ಬೈಬಲ್‌ನಲ್ಲಿ ತುಂಬ ಒಳ್ಳೇ ಸಲಹೆಗಳಿವೆ. ಯಾಕಂದ್ರೆ ಅವನ್ನ ಕೊಟ್ಟಿರೋದು ನಮ್ಮನ್ನ ಸೃಷ್ಟಿ ಮಾಡಿರೋ ದೇವರು. ಹಾಗಂತ ಇದು ಆರೋಗ್ಯನ ಚೆನ್ನಾಗಿ ನೋಡ್ಕೊಳ್ಳೋಕೆ ಇರೋ ಒಂದು ಪುಸ್ತಕ ಅಲ್ಲ. ಆದ್ರೂ, ಜೀವನದಲ್ಲಿ ಸಮಸ್ಯೆಗಳು ಬಂದಾಗ, ಸರಿಯಾಗಿ ಯೋಚನೆ ಮಾಡೋಕೆ ಆಗದೆ ಇದ್ದಾಗ, ಕಹಿ ನೆನಪುಗಳು ನಮ್ಮನ್ನ ಕಾಡಿದಾಗ, ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಸಮಸ್ಯೆಗಳು ಬಂದಾಗ ಏನು ಮಾಡಬೇಕು ಅಂತ ಸಲಹೆಗಳು ಅದ್ರಲ್ಲಿದೆ.

ನಮ್ಮನ್ನ ಸೃಷ್ಟಿ ಮಾಡಿರೋ ಯೆಹೋವ ದೇವರು a ನಮ್ಮ ಯೋಚನೆ ಮತ್ತು ಭಾವನೆಗಳನ್ನ ಎಲ್ಲರಿಗಿಂತ ಚೆನ್ನಾಗಿ ಅರ್ಥಮಾಡ್ಕೊಳ್ತಾನೆ ಅಂತ ಬೈಬಲ್‌ ಹೇಳುತ್ತೆ. ಸಮಸ್ಯೆಗಳು ಬಂದಾಗ ನಮಗೆ ಸಹಾಯ ಮಾಡೋಕೆ ಆತನು ಕಾಯ್ತಾ ಇರ್ತಾನೆ. ಉದಾಹರಣೆಗೆ, ಬೈಬಲಿನಲ್ಲಿರೋ ಈ ಎರಡು ಮಾತುಗಳು ನಮಗೆ ನೆಮ್ಮದಿ ಕೊಡುತ್ತೆ:

“ಹೃದಯ ಒಡೆದು ಹೋಗಿರೋರಿಗೆ ಯೆಹೋವ ಹತ್ರಾನೇ ಇರ್ತಾನೆ, ಮನಸ್ಸು ಚೂರುಚೂರಾಗಿ ಹೋಗಿರೋರನ್ನ ಆತನು ಕಾದು ಕಾಪಾಡ್ತಾನೆ.”​—ಕೀರ್ತನೆ 34:18.

“ನಾನು, ನಿನ್ನ ದೇವರಾದ ಯೆಹೋವ, ನಿನ್ನ ಬಲಗೈಯನ್ನ ಹಿಡ್ಕೊಂಡಿದ್ದೀನಿ, ‘ಹೆದರಬೇಡ, ನಾನು ನಿನಗೆ ಸಹಾಯ ಮಾಡ್ತೀನಿ’ ಅಂತ ನಾನೇ ನಿನಗೆ ಹೇಳ್ತಿದ್ದೀನಿ.”​—ಯೆಶಾಯ 41:13.

ಮಾನಸಿಕ ಆರೋಗ್ಯದ ಸಮಸ್ಯೆಗಳು ಬಂದಾಗ ಯೆಹೋವ ದೇವರು ನಮಗೆ ಹೇಗೆಲ್ಲಾ ಸಹಾಯ ಮಾಡ್ತಾನೆ ಅಂತ ಮುಂದಿನ ಲೇಖನಗಳಲ್ಲಿ ನೋಡಿ.

a ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.