ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಟ್ಟೆಬಾಲದ ಗಾಡ್ವಿಟ್‌ ಹಕ್ಕಿಯ ಸಂಚಾರಶಕ್ತಿ

ಪಟ್ಟೆಬಾಲದ ಗಾಡ್ವಿಟ್‌ ಹಕ್ಕಿಯ ಸಂಚಾರಶಕ್ತಿ

ವಿಕಾಸವೇ? ವಿನ್ಯಾಸವೇ?

ಪಟ್ಟೆಬಾಲದ ಗಾಡ್ವಿಟ್‌ ಹಕ್ಕಿಯ ಸಂಚಾರಶಕ್ತಿ

ಪಟ್ಟೆಬಾಲದ ಗಾಡ್ವಿಟ್‌ ಹಕ್ಕಿಯ ವಲಸೆಹೋಗುವಿಕೆ ಅರ್ಥವಾಗದ ಅತ್ಯದ್ಭುತ. ಈ ಪಕ್ಷಿ 11,000 ಕಿಲೋಮೀಟರ್‌ ದೂರ ಸಂಚರಿಸಬಲ್ಲದು. ಆ ಪರ್ಯಟನೆ ಮಾಡಲು ಅದಕ್ಕೆ ಎಂಟಕ್ಕೂ ಹೆಚ್ಚು ದಿನಗಳು ತಗಲುತ್ತೆ.

ಪರಿಗಣಿಸಿ: ಕೆಲವು ವಿಧದ ಪಕ್ಷಿಗಳು ಯಾನಕ್ಕೆ ಭೂಮಿಯ ಅಯಸ್ಕಾಂತ ಕ್ಷೇತ್ರವನ್ನು ಮಾರ್ಗದರ್ಶಕವಾಗಿ ಉಪಯೋಗಿಸುತ್ತವೆ ಎನ್ನುವುದು ಸಂಶೋಧಕರ ನಂಬಿಕೆ. ಅವುಗಳು ಭೂಮಿಯ ಅಯಸ್ಕಾಂತ ಕ್ಷೇತ್ರಕ್ಕೆ ಎಷ್ಟು ಸಮನ್ವಯವಾಗಿ ಚಲಿಸುತ್ತವೆ ಎಂದರೆ ಅವುಗಳ ಮಿದುಳಿನಲ್ಲಿ ದಿಕ್ಸೂಚಿ ಇಡಲಾಗಿದೆಯೊ ಏನೋ ಅಂತ ಅನ್ಸುತ್ತೆ ಅಂತ ಹೇಳುತ್ತಾರೆ ಸಂಶೋಧಕರು. ಅಲ್ಲದೆ ಗಾಡ್ವಿಟ್‌ ಪಕ್ಷಿ ಹಗಲಲ್ಲಿ ಸೂರ್ಯನನ್ನು ಮತ್ತು ಇರುಳಲ್ಲಿ ನಕ್ಷತ್ರಗಳನ್ನು ಮಾರ್ಗಸೂಚಕಗಳಾಗಿ ಬಳಸುತ್ತವೆ. ಗಾಳಿ ಯಾವ ಕಡೆ ಬೀಸುತ್ತೆ ಅನ್ನೋದನ್ನು ಮುಂಚೆನೇ ಗ್ರಹಿಸುವ ಶಕ್ತಿ ಇರುವುದರಿಂದ ಅದರಿಂದ ಪ್ರಯೋಜನ ಪಡೆಯುತ್ತೆ ಅಂತ ಹೇಳಲಾಗುತ್ತೆ. ಇದರಿಂದ ಅದೇ ದಿಕ್ಕಿನಲ್ಲಿ ವೇಗವಾಗಿ ಹಾರಾಡಲು ಅವಕ್ಕೆ ಸಾಧ್ಯವಾಗುತ್ತಂತೆ. ಹೀಗಿದ್ದರೂ, ಗಾಡ್ವಿಟ್‌ ಪಕ್ಷಿಗಳು ಇಂಥ ವಿಸ್ಮಯಕಾರಿ ಸಂಚಾರವನ್ನು ಅದ್ಹೇಗೆ ಮಾಡುತ್ತವೆ ಅನ್ನೋ ವಿಷಯದಲ್ಲಿ ಪರಿಣತರು ಇನ್ನೂ ತಬ್ಬಿಬ್ಬುಗೊಂಡಿದ್ದಾರೆ. ಜೀವಶಾಸ್ತ್ರಜ್ಞ ಬಾಬ್‌ ಗಿಲ್‌ ಹೇಳುತ್ತಾರೆ: “ನಾನು ಇಪ್ಪತ್ತು ವರ್ಷಗಳಿಂದ ಅವನ್ನು ಅಧ್ಯಯನ ಮಾಡುತ್ತಾ ಇದ್ದೀನಿ. ಆದರೂ ನಾನಿನ್ನು ಕೌತುಕದಿಂದ ಹೊರಬಂದಿಲ್ಲ.”

ನೀವೇನು ನೆನಸುತ್ತೀರಿ? ಈ ಪಟ್ಟೆಬಾಲದ ಗಾಡ್ವಿಟ್‌ ಪಕ್ಷಿಯ ಸಂಚಾರಶಕ್ತಿ ವಿಕಾಸವಾಗಿ ಬಂತೇ? ಸೃಷ್ಟಿಕರ್ತ ವಿನ್ಯಾಸಿಸಿದನೇ? ◼ (g13-E 01)

[ಪುಟ 16ರಲ್ಲಿರುವ ಚಿತ್ರ]

[ಕೃಪೆ]

ಚಿತ್ರಕೃಪೆ: Courtesy Grandpa@50