ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ದೇವರು ನಿಮ್ಮ ಸ್ನೇಹಿತನಾ?

ದೇವರು ಬಯಸುವುದನ್ನು ಮಾಡುತ್ತೀರೋ?

ದೇವರು ಬಯಸುವುದನ್ನು ಮಾಡುತ್ತೀರೋ?

“ನಿನಗೇನು ಬೇಕು? ಒಂದು ಮಾತು ಹೇಳು ಸಾಕು, ನಾನು ಮಾಡ್ತೀನಿ.” ಈ ಮಾತನ್ನು ಒಬ್ಬ ಅಪರಿಚಿತನಿಗೆ ಅಥವಾ ಅಲ್ಪಸ್ವಲ್ಪ ಪರಿಚಯ ಇರುವವನಿಗೆ ಹೇಳುತ್ತೇವಾ? ಖಂಡಿತ ಇಲ್ಲ. ಅದೇ ನಮ್ಮ ಆಪ್ತ ಮಿತ್ರನಿಗೆ ಹೇಳಲು ಕಿಂಚಿತ್ತೂ ಯೋಚಿಸುವುದಿಲ್ಲ. ಆಪ್ತ ಸ್ನೇಹಿತರು ಒಬ್ಬರಿಗೊಬ್ಬರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ.

ನಿಜ ಸ್ನೇಹಿತನಾದ ಯೆಹೋವನು ಸಹ ತನ್ನ ಆರಾಧಕರಿಗೆ ಸಂತೋಷ ತರುವ ವಿಷಯಗಳನ್ನು ಮಾಡುತ್ತಾ ಇರುತ್ತಾನೆ ಎಂದು ಬೈಬಲ್ ಪದೇ ಪದೇ ಹೇಳುತ್ತದೆ. ಉದಾಹರಣೆಗೆ, ಯೆಹೋವನಿಗೆ ಅತ್ಯಾಪ್ತನಾಗಿದ್ದ ದಾವೀದ ರಾಜ ಹೀಗೆ ಹೇಳಿದನು, ‘ಯೆಹೋವನೇ, ನನ್ನ ದೇವರೇ, ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ; ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯವು; ಅವು ಅಸಂಖ್ಯಾತವಾಗಿವೆ.’ (ಕೀರ್ತನೆ 40:5) ತನ್ನ ಬಗ್ಗೆ ಇನ್ನೂ ಗೊತ್ತಿಲ್ಲದವರು ಸಹ ಸಂತೋಷವಾಗಿರಲೆಂದು ದೇವರು ‘ಹೇರಳವಾಗಿ ಆಹಾರವನ್ನು ಕೊಡುತ್ತಿದ್ದಾನೆ.’—ಅಪೊಸ್ತಲರ ಕಾರ್ಯಗಳು 14:17.

ನಾವು ಯಾರನ್ನು ಪ್ರೀತಿಸುತ್ತೇವೋ, ಗೌರವಿಸುತ್ತೇವೋ ಅವರು ಏನಾದರೂ ಹೇಳಿದರೆ ಅದನ್ನು ಸಂತೋಷವಾಗಿ ಮಾಡುತ್ತೇವೆ

ಇತರರಿಗೆ ಸಂತೋಷ ತರುವ ವಿಷಯಗಳನ್ನು ಮಾಡಲು ಯೆಹೋವನು ಇಷ್ಟಪಡುತ್ತಾನೆ. ಅಂದಮೇಲೆ ಆತನ ಸ್ನೇಹಿತರಾಗಲು ಬಯಸುವವರು ಸಹ ಆತನಿಗೆ ‘ಸಂತೋಷವಾಗುವಂಥ’ ಕೆಲಸಗಳನ್ನು ಮಾಡಬೇಕು ತಾನೇ? (ಜ್ಞಾನೋಕ್ತಿ 27:11) ದೇವರನ್ನು ಸಂತೋಷಪಡಿಸಲು ನಾವು ಏನೇನು ಮಾಡಬೇಕು? ಇದರ ಬಗ್ಗೆ ಬೈಬಲ್ ಹೀಗೆ ಹೇಳುತ್ತದೆ, “ಒಳ್ಳೇದನ್ನು ಮಾಡುವುದನ್ನೂ ಇತರರೊಂದಿಗೆ ಹಂಚಿಕೊಳ್ಳುವುದನ್ನೂ ಮರೆಯಬೇಡಿರಿ, ಏಕೆಂದರೆ ಇಂಥ ಯಜ್ಞಗಳಲ್ಲಿ ದೇವರು ಸಂತೃಪ್ತನಾಗುತ್ತಾನೆ.” (ಇಬ್ರಿಯ 13:16) ಯೆಹೋವನನ್ನು ಸಂತೋಷಪಡಿಸಲು ಇದರ ಜೊತೆ ಇನ್ನೇನಾದರೂ ಮಾಡಬೇಕಾ?

‘ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ’ ಎಂದು ಬೈಬಲ್ ಹೇಳುತ್ತದೆ. (ಇಬ್ರಿಯ 11:6) ‘ಅಬ್ರಹಾಮನು ಯೆಹೋವನಲ್ಲಿ ನಂಬಿಕೆಯಿಟ್ಟ’ ನಂತರವೇ ‘ಯೆಹೋವನು ಅವನನ್ನು ತನ್ನ ಸ್ನೇಹಿತನೆಂದು ಕರೆದನು.’ (ಯಾಕೋಬ 2:23) ದೇವರ ಅನುಗ್ರಹ ಪಡೆಯಲು ‘ಆತನಲ್ಲಿ ನಂಬಿಕೆಯಿಡುವುದು’ ತುಂಬ ಮುಖ್ಯ ಎನ್ನುವುದನ್ನು ಯೇಸು ಸಹ ಒತ್ತಿ ಹೇಳಿದನು. (ಯೋಹಾನ 14:1) ಯೆಹೋವನ ಸ್ನೇಹಿತರಾಗಲು ಬೇಕಾಗಿರುವಂಥ ನಂಬಿಕೆಯನ್ನು ಹೇಗೆ ಬೆಳೆಸಿಕೊಳ್ಳಬಹುದು? ಮೊದಲು ಕ್ರಮವಾಗಿ ಬೈಬಲ್‌ ಅಧ್ಯಯನ ಮಾಡಿ, ದೇವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. ಆಗ ಯೆಹೋವ ದೇವರನ್ನು ಹೇಗೆ ‘ಸಂಪೂರ್ಣವಾಗಿ ಮೆಚ್ಚಿಸಬಹುದೆಂದು’ ಕಲಿಯುವಿರಿ. ಹೀಗೆ ಯೆಹೋವನ ಬಗ್ಗೆ ತಿಳಿದುಕೊಳ್ಳುತ್ತಾ ಹೋಗುವಾಗ ಮತ್ತು ಆತನ ಆಜ್ಞೆಗಳನ್ನು ಪಾಲಿಸುವಾಗ, ಆತನ ಮೇಲಿನ ನಿಮ್ಮ ನಂಬಿಕೆ ಹೆಚ್ಚುವುದು ಮತ್ತು ನೀವಾತನಿಗೆ ಅತ್ಯಾಪ್ತರಾಗುವಿರಿ. —ಕೊಲೊಸ್ಸೆ 1:9, 10. (w14-E 12/01)