ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 41

ಲೈಂಗಿಕತೆ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಲೈಂಗಿಕತೆ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ತುಂಬ ಜನರಿಗೆ ಲೈಂಗಿಕತೆ ಬಗ್ಗೆ ಮಾತಾಡಕ್ಕೆ ಮುಜುಗರ ಆಗುತ್ತೆ. ಆದರೆ ಬೈಬಲ್‌ ಅದರ ಬಗ್ಗೆ ನೇರವಾಗಿ, ಅದೇ ಸಮಯದಲ್ಲಿ ಗೌರವದಿಂದ ಮಾತಾಡುತ್ತೆ. ಲೈಂಗಿಕತೆ ಬಗ್ಗೆ ಬೈಬಲಿನಲ್ಲಿರುವ ಮಾಹಿತಿ ಬಗ್ಗೆ ನಾವು ಯಾಕೆ ತಿಳಿದುಕೊಳ್ಳಬೇಕು? ನಮಗೆ ಜೀವ ಕೊಟ್ಟಿರೋದು ಯೆಹೋವ ದೇವರು. ನಾವು ಯಾವ ರೀತಿಯ ಜೀವನ ನಡೆಸಿದ್ರೆ ಒಳ್ಳೇದು ಅಂತ ಆತನಿಗೆ ಚೆನ್ನಾಗಿ ಗೊತ್ತು. ಆತನ ನೀತಿನಿಯಮಗಳನ್ನ ಪಾಲಿಸೋದಾದ್ರೆ ನಮಗೆ ಪ್ರಯೋಜನ ಇದೆ ಮತ್ತು ನಾವು ಆತನನ್ನ ಮೆಚ್ಚಿಸುತ್ತೇವೆ. ಅಷ್ಟೇ ಅಲ್ಲ, ಈಗಲೂ ಮತ್ತು ಮುಂದೆ ಎಂದೆಂದೂ ಖುಷಿಯಾಗಿ ಇರುತ್ತೇವೆ.

1. ಲೈಂಗಿಕತೆ ಬಗ್ಗೆ ಯೆಹೋವ ದೇವರ ಅನಿಸಿಕೆ ಏನು?

ಮದುವೆಯಾದ ಗಂಡು ಹೆಣ್ಣು ಆನಂದಿಸಬೇಕು ಅಂತ ಯೆಹೋವ ದೇವರು ಲೈಂಗಿಕತೆಯನ್ನ ಉಡುಗೊರೆಯಾಗಿ ಕೊಟ್ಟಿದ್ದಾನೆ. ಈ ಉಡುಗೊರೆಯಿಂದ ದಂಪತಿಗಳಿಗೆ ಮಕ್ಕಳನ್ನ ಪಡೆದುಕೊಳ್ಳಲು ಆಗುತ್ತೆ. ಅಷ್ಟೇ ಅಲ್ಲ, ತಮ್ಮ ಪ್ರೀತಿಯನ್ನ, ಕೋಮಲ ಮಮತೆಯನ್ನ ಒಬ್ಬರಿಗೊಬ್ಬರು ಸಂತೋಷವಾಗಿ ಮತ್ತು ದೇವರು ಮೆಚ್ಚುವ ರೀತಿಯಲ್ಲಿ ತೋರಿಸಕ್ಕೂ ಆಗುತ್ತೆ. “ನಿನ್ನ ಯೌವನದ ಹೆಂಡತಿ ಜೊತೆ ಖುಷಿಯಾಗಿರು” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 5:18, 19) ಮದುವೆಯಾದ ಕ್ರೈಸ್ತರು ತಮ್ಮ ಸಂಗಾತಿಗೆ ನಿಷ್ಠರಾಗಿರಬೇಕು, ವ್ಯಭಿಚಾರ ಮಾಡಲೇಬಾರದು ಅಂತ ಯೆಹೋವನು ಬಯಸ್ತಾನೆ.—ಇಬ್ರಿಯ 13:4 ಓದಿ.

2. ಲೈಂಗಿಕ ಅನೈತಿಕತೆಯಲ್ಲಿ ಏನೆಲ್ಲಾ ಒಳಗೂಡಿದೆ?

“ಲೈಂಗಿಕ ಅನೈತಿಕತೆ ಮಾಡುವವರು . . . ದೇವರ ಆಳ್ವಿಕೆಯಲ್ಲಿ ಇರಲ್ಲ” ಅಂತ ಬೈಬಲ್‌ ಹೇಳುತ್ತೆ. (1 ಕೊರಿಂಥ 6:9, 10) ಬೈಬಲನ್ನ ಬರೆದವರು ಲೈಂಗಿಕ ಅನೈತಿಕತೆ ಬಗ್ಗೆ ಹೇಳುವಾಗ ಪೋರ್ನಿಯ ಅನ್ನೋ ಗ್ರೀಕ್‌ ಪದವನ್ನ ಬಳಸಿದ್ದಾರೆ. ಇದರಲ್ಲಿ (1) ಒಬ್ಬರಿಗೊಬ್ಬರು ಮದುವೆ ಆಗದ ಇಬ್ಬರು ವ್ಯಕ್ತಿಗಳ ನಡುವೆ ಇರುವ ಲೈಂಗಿಕ ಸಂಬಂಧ a (2) ಸಲಿಂಗಕಾಮ ಮತ್ತು (3) ಪಶುಗಮನ (ಪ್ರಾಣಿಗಳ ಜೊತೆ ನಡೆಸುವ ಲೈಂಗಿಕತೆ) ಸೇರಿದೆ. ‘ಲೈಂಗಿಕ ಅನೈತಿಕತೆಯಿಂದ ದೂರ ಇರೋದರಿಂದ‘ ನಮಗೂ ಪ್ರಯೋಜನ ಇದೆ ಮತ್ತು ಯೆಹೋವ ದೇವರಿಗೂ ಸಂತೋಷ ಆಗುತ್ತೆ.—1 ಥೆಸಲೊನೀಕ 4:3.

ಹೆಚ್ಚನ್ನ ತಿಳಿಯೋಣ

ಲೈಂಗಿಕ ಅನೈತಿಕತೆಯಿಂದ ದೂರ ಇರೋದು ಹೇಗೆ ಅಂತ ತಿಳಿಯಿರಿ ಮತ್ತು ನೈತಿಕವಾಗಿ ಶುದ್ಧರಾಗಿ ಇರೋದ್ರಿಂದ ಸಿಗುವ ಪ್ರಯೋಜನಗಳ ಬಗ್ಗೆನೂ ತಿಳಿಯಿರಿ.

3. ಲೈಂಗಿಕ ಅನೈತಿಕತೆಯಿಂದ ದೂರ ಓಡಿ ಹೋಗಿ

ದೇವಭಕ್ತನಾಗಿದ್ದ ಯೋಸೇಫನಿಗೆ ಒಂದು ಸವಾಲು ಬಂತು. ಆದಿಕಾಂಡ 39:1-12 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಯೋಸೇಫ ಯಾಕೆ ಓಡಿ ಹೋದ?—ವಚನ 9 ನೋಡಿ.

  • ಯೋಸೇಫ ಮಾಡಿದ ನಿರ್ಧಾರ ಸರಿಯಾಗಿತ್ತು ಅಂತ ನಿಮಗೆ ಅನಿಸುತ್ತಾ? ಯಾಕೆ?

ಯುವಜನರು ಯೋಸೇಫನನ್ನ ಅನುಕರಿಸುತ್ತಾ ಲೈಂಗಿಕ ಅನೈತಿಕತೆಯಿಂದ ಹೇಗೆ ದೂರ ಇರಬಹುದು ಅಂತ ನೋಡಿ. ವಿಡಿಯೋ ನೋಡಿ.

ನಾವು ಸಹ ಲೈಂಗಿಕ ಅನೈತಿಕತೆಯನ್ನ ಮಾಡಲೇಬಾರದು ಅಂತ ದೇವರು ಬಯಸುತ್ತಾನೆ. 1 ಕೊರಿಂಥ 6:18 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಯಾವೆಲ್ಲಾ ಸನ್ನಿವೇಶಗಳು ಒಬ್ಬ ವ್ಯಕ್ತಿಯನ್ನ ಲೈಂಗಿಕ ಅನೈತಿಕತೆಯ ಬಲೆಗೆ ಬೀಳಿಸಬಹುದು?

  • ಲೈಂಗಿಕ ಅನೈತಿಕತೆಯಿಂದ ದೂರ ಓಡಿ ಹೋಗೋದು ಹೇಗೆ?

4. ಪ್ರಲೋಭನೆಯನ್ನ ಎದುರಿಸಲು ನಿಮ್ಮಿಂದ ಸಾಧ್ಯ!

ಲೈಂಗಿಕ ಅನೈತಿಕತೆ ಮಾಡಬೇಕು ಅನ್ನೋ ಪ್ರಲೋಭನೆಯನ್ನ ಎದುರಿಸಲು ಯಾವಾಗ ಕಷ್ಟ ಆಗಬಹುದು? ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.

  • ತನ್ನ ಯೋಚನೆ ಮತ್ತು ನಡತೆಯಿಂದ ಹೆಂಡತಿಗೆ ‘ಮೋಸ ಮಾಡುತ್ತಾ ಇದ್ದೀನಿ’ ಅಂತ ಗೊತ್ತಾದಾಗ ಆ ಸಹೋದರ ಏನು ಮಾಡಿದ?

ಕೆಲವೊಮ್ಮೆ ನಂಬಿಗಸ್ತ ಕ್ರೈಸ್ತರು ಕೂಡ ತಮ್ಮ ಯೋಚನೆಯನ್ನ ಶುದ್ಧವಾಗಿ ಇಟ್ಟುಕೊಳ್ಳಲು ಹೋರಾಡುತ್ತಾರೆ. ನೀವು ಹೇಗೆ ಕೆಟ್ಟ ಯೋಚನೆಗಳಿಂದ ದೂರ ಇರಬಹುದು? ಫಿಲಿಪ್ಪಿ 4:8 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ನಾವು ಯಾವ ರೀತಿಯ ವಿಷಯಗಳ ಬಗ್ಗೆ ಯೋಚನೆ ಮಾಡಬೇಕು?

  • ಬೈಬಲ್‌ ಓದೋದು ಮತ್ತು ಯೆಹೋವನ ಸೇವೆಯಲ್ಲಿ ಬಿಜ಼ಿಯಾಗಿ ಇರೋದು ತಪ್ಪಾದ ಯೋಚನೆಗಳಿಂದ ದೂರ ಇರೋಕೆ ಹೇಗೆ ಸಹಾಯ ಮಾಡುತ್ತೆ?

5. ಯೆಹೋವನ ನೀತಿನಿಯಮಗಳಿಂದ ನಮಗೆ ಪ್ರಯೋಜನ ಇದೆ

ನಮಗೆ ಏನು ಒಳ್ಳೇದು ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ಹಾಗಾಗಿ ನಾವು ಹೇಗೆ ನೈತಿಕವಾಗಿ ಶುದ್ಧರಾಗಿರಬಹುದು ಮತ್ತು ಅದರಿಂದ ನಮಗೇನು ಪ್ರಯೋಜನ ಇದೆ ಅಂತ ಆತನು ತಿಳಿಸಿದ್ದಾನೆ. ಜ್ಞಾನೋಕ್ತಿ 7:7-27 ಓದಿ ಅಥವಾವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.

  • ಒಬ್ಬ ಯುವಕ ಹೇಗೆ ತಪ್ಪು ದಾರಿ ಹಿಡಿದ?—ಜ್ಞಾನೋಕ್ತಿ 7:8, 9 ನೋಡಿ.

  • ಲೈಂಗಿಕ ಅನೈತಿಕತೆಯಿಂದ ಗಂಭೀರ ಪರಿಣಾಮಗಳು ಆಗುತ್ತೆ ಅಂತ ಜ್ಞಾನೋಕ್ತಿ 7:23, 26 ತಿಳಿಸುತ್ತೆ. ನಾವು ನೈತಿಕವಾಗಿ ಶುದ್ಧರಾಗಿದ್ರೆ ಯಾವೆಲ್ಲಾ ಸಮಸ್ಯೆಗಳಿಂದ ದೂರ ಇರಬಹುದು?

  • ನಾವು ನೈತಿಕವಾಗಿ ಶುದ್ಧರಾಗಿದ್ರೆ ಹೇಗೆ ಎಂದೆಂದೂ ಖುಷಿಯಾಗಿ ಬಾಳಲು ಆಗುತ್ತೆ?

ಸಲಿಂಗಕಾಮದ ಬಗ್ಗೆ ಬೈಬಲ್‌ ತುಂಬ ಕಟ್ಟುನಿಟ್ಟಾಗಿ ಹೇಳುತ್ತೆ ಅಂತ ಕೆಲವರು ಹೇಳುತ್ತಾರೆ. ಆದರೆ ಯೆಹೋವನು ನಮ್ಮನ್ನ ತುಂಬ ಪ್ರೀತಿಸ್ತಾನೆ ಮತ್ತು ನಾವೆಲ್ಲರೂ ಎಂದೆಂದೂ ಖುಷಿಯಾಗಿ ಜೀವಿಸಬೇಕು ಅಂತ ಬಯಸ್ತಾನೆ. ಅಂಥ ಜೀವನವನ್ನ ಪಡೆಯಬೇಕಂದ್ರೆ ಯೆಹೋವ ದೇವರ ನೀತಿನಿಯಮಗಳ ಪ್ರಕಾರ ನಾವು ಜೀವನ ಮಾಡಲೇಬೇಕು. 1 ಕೊರಿಂಥ 6:9-11 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಬೇರೆ ತಪ್ಪಾದ ಬಯಕೆಗಳ ತರಾನೇ ಸಲಿಂಗಕಾಮದ ಬಯಕೆಗಳು ಕೂಡ ತಪ್ಪು ಅಂತ ಈ ವಚನಗಳಿಂದ ನಮಗೆ ಹೇಗೆ ಗೊತ್ತಾಗುತ್ತೆ?

ನಾವು ದೇವರನ್ನ ಮೆಚ್ಚಿಸಬೇಕಂದ್ರೆ ನಮ್ಮ ಜೀವನದಲ್ಲಿ ಬದಲಾವಣೆಗಳನ್ನ ಮಾಡಿಕೊಳ್ಳಬೇಕು. ಆದರೆ ಅಂಥ ಬದಲಾವಣೆಗಳನ್ನ ಮಾಡಿಕೊಂಡ್ರೆ ಏನಾದ್ರೂ ಪ್ರಯೋಜನ ಇದೆಯಾ? ಕೀರ್ತನೆ 19:8, 11 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ನೈತಿಕತೆ ಬಗ್ಗೆ ಯೆಹೋವನು ಇಟ್ಟಿರೋ ನೀತಿನಿಯಮಗಳು ಸರಿಯಾಗೇ ಇವೆ ಅಂತ ನಿಮಗೆ ಅನಿಸುತ್ತಾ? ಯಾಕೆ?

ಯೆಹೋವನು ತನ್ನ ನೀತಿನಿಯಮಗಳನ್ನ ಪಾಲಿಸೋಕೆ ತುಂಬ ಜನರಿಗೆ ಸಹಾಯ ಮಾಡಿದ್ದಾನೆ. ಆತನು ನಿಮಗೂ ಖಂಡಿತ ಸಹಾಯ ಮಾಡುತ್ತಾನೆ

ಕೆಲವರು ಹೀಗಂತಾರೆ: “ಇಬ್ಬರ ಮಧ್ಯ ಪ್ರೀತಿ ಇದ್ರೆ ಸಾಕು, ಅವರು ಸೆಕ್ಸ್‌ ಮಾಡೋದ್ರಲ್ಲಿ ತಪ್ಪೇನಿಲ್ಲ.”

  • ನಿಮಗೇನು ಅನಿಸುತ್ತೆ?

ನಾವೇನು ಕಲಿತ್ವಿ

ಗಂಡ ಹೆಂಡತಿ ಆನಂದಿಸೋಕೆ ಯೆಹೋವ ದೇವರು ಲೈಂಗಿಕತೆಯನ್ನ ಉಡುಗೊರೆಯಾಗಿ ಕೊಟ್ಟಿದ್ದಾನೆ.

ನೆನಪಿದೆಯಾ

  • ಲೈಂಗಿಕ ಅನೈತಿಕತೆಯಲ್ಲಿ ಏನೆಲ್ಲಾ ಒಳಗೂಡಿದೆ?

  • ಲೈಂಗಿಕ ಅನೈತಿಕತೆಯಿಂದ ದೂರ ಇರಲು ಯಾವುದು ಸಹಾಯ ಮಾಡುತ್ತೆ?

  • ಯೆಹೋವನ ನೀತಿನಿಯಮಗಳನ್ನ ಪಾಲಿಸೋದ್ರಿಂದ ನಮಗೆ ಯಾವೆಲ್ಲಾ ಪ್ರಯೋಜನಗಳಿವೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಒಟ್ಟಿಗೆ ಜೀವನ ಮಾಡಲು ಬಯಸುವ ಗಂಡು ಹೆಣ್ಣು ಮದುವೆ ಆಗಬೇಕು ಅಂತ ಯೆಹೋವ ದೇವರು ಯಾಕೆ ಬಯಸ್ತಾನೆ ಅಂತ ನೋಡಿ.

“ಮದ್ವೆ ಮಾಡ್ಕೊಳ್ದೆ ಒಟ್ಟಿಗೆ ಜೀವನ ಮಾಡೋದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?” (jw.org ಲೇಖನ)

ಸಲಿಂಗಕಾಮ ತಪ್ಪು ಅಂತ ಬೈಬಲ್‌ ಹೇಳುತ್ತೆ. ಆದರೆ ಸಲಿಂಗಕಾಮಿಗಳನ್ನ ದ್ವೇಷಿಸಬೇಕು ಅಂತ ಅದರ ಅರ್ಥ ಅಲ್ಲ, ಯಾಕೆ?

“ಸಲಿಂಗಕಾಮ ತಪ್ಪಾ?” (jw.org ಲೇಖನ)

ಸೆಕ್ಸ್‌ ಬಗ್ಗೆ ಯೆಹೋವ ದೇವರು ಕೊಟ್ಟಿರುವ ನಿಯಮಗಳು ನಮ್ಮನ್ನ ಸಂರಕ್ಷಿಸುತ್ತೆ, ಹೇಗೆ?

“ಮೌಖಿಕ ಸೆಕ್ಸ್‌ (ಓರಲ್ಸೆಕ್ಸ್‌) ಕೂಡ ಒಂದು ಲೈಂಗಿಕ ಕ್ರಿಯೆನಾ?” (jw.org ಲೇಖನ)

ತನ್ನ ಜೀವನ ರೀತಿಯಲ್ಲಿ ಬದಲಾವಣೆ ಮಾಡಿ ಯೆಹೋವನಿಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳಲು ಒಬ್ಬ ಸಲಿಂಗಕಾಮಿಗೆ ಯಾವುದು ಸಹಾಯ ಮಾಡಿತು ಅಂತ ತಿಳಿದುಕೊಳ್ಳಲು “ಅವರು ನನ್ನ ಜೊತೆ ಗೌರವದಿಂದ ನಡೆದುಕೊಂಡರು” ಅನ್ನೋ ಲೇಖನ ನೋಡಿ.

“ಬದುಕು ಬದಲಾದ ವಿಧ” (ಕಾವಲಿನಬುರುಜು, ಲೇಖನ)

a ಇದರಲ್ಲಿ ಲೈಂಗಿಕ ಸಂಭೋಗ, ಬಾಯಿ ಸೆಕ್ಸ್‌ (ಓರಲ್‌ ಸೆಕ್ಸ್‌), ಗುದದ್ವಾರದ ಮೂಲಕ ಮಾಡುವ ಸೆಕ್ಸ್‌ (ಏನಲ್‌ ಸೆಕ್ಸ್‌), ಮತ್ತು ಬೇರೊಬ್ಬ ವ್ಯಕ್ತಿಯ ಜನನಾಂಗವನ್ನ ಲೈಂಗಿಕ ರೀತಿಯಲ್ಲಿ ಉಜ್ಜುವುದು ಅಥವಾ ನೇವರಿಸುವುದು ಸೇರಿದೆ.