ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು

“ಇಡೀ ಭೂಮಿಯಲ್ಲಿ” ಮಿಷನರಿಗಳು

“ಇಡೀ ಭೂಮಿಯಲ್ಲಿ” ಮಿಷನರಿಗಳು

ಜೂನ್‌ 1, 2021

 ಯೇಸು “ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ” ಅಂತ ತನ್ನ ಶಿಷ್ಯರಿಗೆ ಹೇಳಿದನು. (ಅಪೊಸ್ತಲರ ಕಾರ್ಯ 1:8) ಯೇಸುವಿನ ಈ ಮಾತನ್ನು ಯೆಹೋವನ ಸಾಕ್ಷಿಗಳು ತುಂಬಾ ಹುರುಪಿನಿಂದ ಮಾಡ್ತಿದ್ದಾರೆ. ಹಾಗಂತ ಎಲ್ಲರಿಗೂ ಸಿಹಿಸುದ್ದಿ ಸಾರಿ ಆಗಿದೆಯಾ? ಇಲ್ಲ. ಭೂಮಿಯ ಕೆಲವು ಭಾಗಗಳಲ್ಲಿ ಮತ್ತು ಜಾಸ್ತಿ ಜನಸಂಖ್ಯೆ ಇರೋ ಎಷ್ಟೋ ಜಾಗಗಳಲ್ಲಿ ಸಿಹಿಸುದ್ದಿ ಇನ್ನೂ ತಲುಪಿಲ್ಲ. ಇನ್ನೂ ಕೆಲವು ದೇಶಗಳಲ್ಲಿ ಬರೀ ಬೆರಳೆಣಿಕೆಯಷ್ಟು ಸಾಕ್ಷಿಗಳಿದ್ದಾರೆ. (ಮತ್ತಾಯ 9:37, 38) ಈ ಎಲ್ಲಾ ಜಾಗದಲ್ಲಿರೋ ಜನರಿಗೆ ಸಿಹಿಸುದ್ದಿ ಸಾರೋದು ಹೇಗೆ? ಅದಕ್ಕೆ ಏನಾದ್ರೂ ಏರ್ಪಾಡಿದೆಯಾ?

 ಯೇಸು ಕೊಟ್ಟ ಆ ಅಮೂಲ್ಯ ಆಜ್ಞೆಯನ್ನು ಪೂರೈಸಲು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸರ್ವಿಸ್‌ ಕಮಿಟಿಯವರು ಒಂದು ಏರ್ಪಾಡನ್ನ ಮಾಡಿದ್ದಾರೆ. ಲೋಕವ್ಯಾಪಕವಾಗಿ ಸಿಹಿಸುದ್ದಿ ಸಾರೋಕೆ ಮಿಷನರಿಗಳನ್ನ ನೇಮಿಸಿದ್ದಾರೆ. ಸದ್ಯಕ್ಕೆ 3, 090 ಮಿಷನರಿಗಳು ಸೇವೆ ಮಾಡ್ತಿದ್ದಾರೆ. a ಇದರಲ್ಲಿ ಹೆಚ್ಚಿನವರು ರಾಜ್ಯ ಪ್ರಚಾರಕರ ಶಾಲೆಯಿಂದ ತರಬೇತಿ ಪಡ್ಕೊಂಡಿದ್ದಾರೆ. ತಮ್ಮ ಸ್ವಂತ ಕುಟುಂಬ, ಮನೆ, ಊರನ್ನ ಬಿಟ್ಟು ಬೇರೆ ದೇಶಕ್ಕೆ ಹೋಗಿ ಸೇವೆ ಮಾಡ್ತಿದ್ದಾರೆ. ಅವರು ತಮಗೆ ಸಿಕ್ಕಿರೋ ತರಬೇತಿ, ಕೌಶಲ ಮತ್ತು ಅನುಭವವನ್ನು ಸಿಹಿಸುದ್ದಿ ಸಾರೋಕೆ ಬಳಸ್ತಿದ್ದಾರೆ. ಅವ್ರ ಈ ಸ್ವತ್ಯಾಗ ನೋಡಿ ಹೊಸದಾಗಿ ಬೈಬಲ್‌ ಕಲಿಯೋರಿಗೆ ದೇವರ ಸೇವೆ ಮಾಡಬೇಕು ಅನ್ನೋ ಆಸೆ ಜಾಸ್ತಿ ಆಗಿದೆ. ಅವ್ರ ಈ ಒಳ್ಳೇ ಮಾದರಿಗೆ ನಾವು ಥ್ಯಾಂಕ್ಸ್‌ ಹೇಳಲೇಬೇಕು.

ಹೆಚ್ಚು ಸಾಕ್ಷಿಗಳು ಇಲ್ಲದೇ ಇರೋ ಜಾಗದಲ್ಲಿ ಸಿಹಿಸುದ್ದಿ ಸಾರಲು ಮಿಷನರಿಗಳು ಸಹಾಯ ಮಾಡುತ್ತಾರೆ

ಸಹಾಯ ಮಾಡಲು ಸಹಾಯ ನೀಡಿ

 ಇವ್ರಿಗೆ ಸಹಾಯ ಮಾಡೋಕೆ ಪ್ರತಿ ಶಾಖಾ ಕಛೇರಿಯಲ್ಲಿ ಫೀಲ್ಡ್‌ ಮಿನಿಸ್ಟರ್ಸ್‌ ಡೆಸ್ಕ್‌ ಅನ್ನೋ ಇಲಾಖೆ ಇದೆ. ಸರ್ವಿಸ್‌ ಡಿಪಾರ್ಟ್‌ಮೆಂಟ್‌ನ ಕೆಳಗೆ ಕೆಲ್ಸ ಮಾಡೋ ಈ ಇಲಾಖೆ ಶಾಖಾ ಕಮಿಟಿಯ ಜೊತೆ ಕೈ ಜೋಡಿಸಿ ಮಿಷನರಿಗಳ ಅಗತ್ಯಗಳನ್ನ ಪೂರೈಸುತ್ತೆ. ಅದರಲ್ಲಿ ಅವರ ವಸತಿ, ಆರೋಗ್ಯಾರೈಕೆ, ಜೀವನ ನಡೆಸೋಕೆ ಬೇಕಾದ ಸ್ವಲ್ಪ ಹಣ ಕೊಡೋದು ಸೇರಿದೆ. 2020ರ ಸೇವಾವರ್ಷದಲ್ಲಿ ಮಿಷನರಿಗಳಿಗಾಗಿ ಸುಮಾರು 214 ಕೋಟಿಗಿಂತ ಹೆಚ್ಚು ಹಣವನ್ನ ಖರ್ಚು ಮಾಡಲಾಗಿದೆ. ಈ ರೀತಿ ಅವರಿಗೆ ಸಹಾಯ ಸಿಕ್ತಿರೋದ್ರಿಂದ ಯಾವುದೇ ಚಿಂತೆ ಇಲ್ಲದೇ ಸಿಹಿಸುದ್ದಿ ಸಾರೋಕೆ ಆಗ್ತಿದೆ. ಅಷ್ಟೆ ಅಲ್ಲ ಸಭೆಯಲ್ಲಿರೋ ಬೇರೆಯವರಿಗೆ ಸಹಾಯ ಮಾಡೋಕಾಗ್ತಿದೆ.

ಸಭೆಗಳನ್ನು ಬಲಪಡಿಸಲು ಮಿಷನರಿಗಳು ಸಹಾಯ ಮಾಡುತ್ತಾರೆ

 ಸಿಹಿಸುದ್ದಿ ಸಾರೋಕೆ ಮಿಷನರಿಗಳು ಹೇಗೆಲ್ಲಾ ಸಹಾಯ ಮಾಡ್ತಿದ್ದಾರೆ? ಮಲಾವಿ ಶಾಖಾ ಸಮಿತಿ ಸದಸ್ಯರಾದ ಫ್ರ್ಯಾಂಕ್‌ ಮೇಸನ್‌ ಹೀಗೆ ಹೇಳಿದ್ರು: “ಇವರ ಕೌಶಲ ಮತ್ತು ಧೈರ್ಯ ಸಭೆಯಲ್ಲಿರೋ ಸಹೋದರರ ಮೇಲೆ ಒಳ್ಳೇ ಪ್ರಭಾವ ಬೀರಿದೆ. ಸೇವೆ ಮಾಡೋದಕ್ಕೆ ಕಷ್ಟ ಆಗ್ತಿದ್ದ ಟೆರಿಟೊರಿಗಳಲ್ಲಿ ಅಂದ್ರೆ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಮತ್ತು ಬೇರೆ ಭಾಷೆಯ ಟೆರಿಟೊರಿಗಳಲ್ಲಿ ಈಗ ಸಾರೋಕೆ ಆಗ್ತಿದೆ. ಮಿಷನರಿಗಳು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯನ್ನ ಕಲಿಯಲು ಪಡುವ ಪ್ರಯಾಸ ನೋಡಿ ಎಷ್ಟೋ ಯುವಜನರು ಪೂರ್ಣಸಮಯದ ಸೇವೆ ಮಾಡೋದಕ್ಕೆ ಮುಂದೆ ಬಂದಿದ್ದಾರೆ. ಇಂಥಾ ಪ್ರೀತಿಯ ಮಿಷನರಿಗಳನ್ನ ಕೊಟ್ಟಿದ್ದಕ್ಕೆ ಯೆಹೋವನಿಗೆ ಆಭಾರಿಗಳಾಗಿದ್ದೇವೆ.”

 ಇನ್ನೊಂದು ದೇಶದ ಶಾಖಾ ಸಮಿತಿ ಸದಸ್ಯ ಹೇಳಿದ್ದು: “ಇಡೀ ಲೋಕದಲ್ಲಿರುವ ಯೆಹೋವನ ಜನರು ಒಗ್ಗಟ್ಟಾಗಿ ಇದ್ದಾರೆ ಅನ್ನೋದಕ್ಕೆ ಮಿಷನರಿಗಳೇ ಸಾಕ್ಷಿ. ನಮ್ಮ ಸಂಸ್ಕೃತಿ, ಭಾಷೆ, ಬಣ್ಣ ಬೇರೆ ಬೇರೆ ಆಗಿದ್ದರೂ ನಾವೆಲ್ಲರೂ ಐಕ್ಯತೆಯಿಂದ ಇದ್ದೀವಿ ಅಂತ ಸಾಕ್ಷಿಗಳಲ್ಲದವರಿಗೂ ಚೆನ್ನಾಗಿ ಗೊತ್ತಾಗಿದೆ. ಇಂಥಾ ಅಪರೂಪದ ಬಾಂಧವ್ಯಕ್ಕೆ ಕಾರಣ ಬೈಬಲ್‌ ನಿಯಮಗಳೇ.”

 ಮಿಷನರಿಗಳಿಂದ ಪ್ರಚಾರಕರಿಗೆ ಯಾವ ಸಹಾಯ ಸಿಕ್ಕಿದೆ? ಟಿಮೋರ್‌-ಲೆಸ್ಟೆ ಅನ್ನೋ ಜಾಗಕ್ಕೆ ಮಿಷನರಿಗಳನ್ನ ನೇಮಿಸಲಾಯಿತು. ಆ ಸಭೆಯಲ್ಲಿದ್ದ ಪೌಲೊ ಅನ್ನೋ ಸಹೋದರ ಅವ್ರಿಂದ ಸಿಕ್ಕ ಪ್ರಯೋಜನದ ಬಗ್ಗೆ ಹೀಗೆ ಹೇಳ್ತಾರೆ: “ನಾವಿರೋ ಜಾಗದಲ್ಲಿ ಬಿಸಿಲು ಜಾಸ್ತಿ. ಆದ್ರೆ ನಮ್ಮ ಸಭೆಗೆ ಬಂದ ಮಿಷನರಿಗಳು ತುಂಬಾ ತಂಪಾದ ವಾತಾವರಣದಲ್ಲಿದ್ದವರು. ಇಲ್ಲಿ ಎಷ್ಟೇ ಬಿಸಿಲಿದ್ರೂ ಅವರು ಪ್ರತಿದಿನ ಬೆಳಿಗ್ಗೆ ಸೇವೆಗೆ ಬರ್ತಿದ್ರು, ಒಂದು ದಿನನೂ ಮಿಸ್‌ ಮಾಡ್ತಿರಲಿಲ್ಲ. ಮಧ್ಯಾಹ್ನ ಆಗ್ತಾ ಆಗ್ತಾ ಬಿಸಿಲು ಜಾಸ್ತಿ ಆಗ್ತಿದ್ರೂ ಕೆಲವು ಸಲ ಸಂಜೆವರೆಗೂ ಪುನರ್ಭೇಟಿ ಮಾಡೋದರಲ್ಲಿ ಬಿಝಿಯಾಗಿರುತ್ತಿದ್ರು. ಬೈಬಲ್‌ ಬಗ್ಗೆ ಕಲಿಯೋದಕ್ಕೆ ಇವರು ತುಂಬಾ ಜನರಿಗೆ ಸಹಾಯ ಮಾಡಿದ್ದಾರೆ. ಅವರಲ್ಲಿ ನಾನೂ ಒಬ್ಬ. ದೇವರ ಸೇವೆಗೆ ಅವರ ಜೀವನನೇ ಮುಡಿಪಾಗಿಟ್ಟಿದ್ದಾರೆ. ಅವರ ಹುರುಪು, ಹುಮ್ಮಸ್ಸು ನೋಡಿ ಸಭೆಯಲ್ಲಿರೋ ಬೇರೆಯವರಿಗೆ ದೇವರ ಸೇವೆ ಜಾಸ್ತಿ ಮಾಡಬೇಕು ಅನ್ನೋ ಆಸೆ ಚಿಗುರೊಡೆದಿದೆ.”

 ಮಲಾವಿಯಲ್ಲಿರೋ ಕೇಟೀ ಅನ್ನೋ ಪಯನೀಯರ್‌ ಸಹೋದರಿಗೆ ಮಿಷನರಿ ದಂಪತಿಯೊಬ್ಬರು ಸಹಾಯ ಮಾಡಿದ್ರು, ಹೇಗೆ ಅಂತ ಅವ್ರ ಮಾತಿಂದನೇ ಕೇಳಿ: “ನಮ್ಮ ಸಭೆಗೆ ಮಿಷನರಿಗಳನ್ನ ನೇಮಿಸಿದಾಗ ನನ್ನ ಕುಟುಂಬದಲ್ಲಿ ನಾನೊಬ್ಬಳೇ ಸಾಕ್ಷಿಯಾಗಿದ್ದೆ. ಆ ದಂಪತಿ ನಂಗೆ ಎಷ್ಟು ಪ್ರೀತಿ ತೋರಿಸಿದ್ರು ಅಂದ್ರೆ ಅವ್ರು ನಮ್ಮ ಕುಟುಂಬದಲ್ಲಿ ಒಬ್ಬರು ಅಂತ ಅನಿಸೋಕೆ ಶುರುವಾಯ್ತು. ಯೆಹೋವನ ಸೇವೆ ಮಾಡಿದ್ರೆ ನಿಜವಾಗಲೂ ಸಂತೋಷವಾಗಿ, ತೃಪ್ತಿಯಾಗಿರಬಹುದು ಅಂತ ಇವರನ್ನ ನೋಡಿ ನನ್ನ ಮಕ್ಕಳು ಕಲಿತರು. ಅವ್ರ ಈ ಒಳ್ಳೇ ಮಾದರಿಯಿಂದ ನನ್ನ ಮೂವರು ಹೆಣ್ಣು ಮಕ್ಕಳು ಪಯನೀಯರ್‌ ಸೇವೆ ಮಾಡ್ತಿದ್ದಾರೆ. ನನ್ನ ಗಂಡ ಕೂಡ ಕೂಟಗಳಿಗೆ ಬರೋದಕ್ಕೆ ಶುರು ಮಾಡಿದ್ದಾರೆ.”

 ಮಿಷನರಿಗಳ ಅವಶ್ಯಕತೆಗಳನ್ನ ಪೂರೈಸೋಕೆ ಹಣ ಎಲ್ಲಿಂದ ಬರುತ್ತೆ? ಲೋಕವ್ಯಾಪಕ ಕೆಲಸಕ್ಕಾಗಿ ನೀವು ಕೊಡುತ್ತಿರೋ ಕಾಣಿಕೆಗಳನ್ನು ಇದಕ್ಕಾಗಿ ಬಳಸಲಾಗುತ್ತೆ. ತುಂಬಾ ಜನರು donate.dan124.com ಮೂಲಕ ಕಾಣಿಕೆಗಳನ್ನು ಕೊಡುತ್ತಾರೆ. ನಿಮ್ಮ ಈ ಉದಾರತೆಗೆ ತುಂಬಾ ಥ್ಯಾಂಕ್ಸ್‌.

a ಸಿಹಿಸುದ್ದಿ ಸಾರೋಕೆ ತುಂಬಾ ಅಗತ್ಯ ಇರೋ ಜಾಗದ ಸಭೆಗಳಿಗೆ ಇವರನ್ನು ನೇಮಿಸಲಾಗುತ್ತೆ. ಇನ್ನೂ ಬೇರೆ 1,001 ಮಿಷನರಿಗಳು ಸರ್ಕಿಟ್‌ ಕೆಲಸ ಮಾಡುತ್ತಿದ್ದಾರೆ.