ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ತಪ್ಪು ಮಾಡಬೇಕು ಅನ್ನೋ ಒತ್ತಡನ ಹೇಗೆ ಜಯಿಸೋದು?

ತಪ್ಪು ಮಾಡಬೇಕು ಅನ್ನೋ ಒತ್ತಡನ ಹೇಗೆ ಜಯಿಸೋದು?

 “ನಾನು ಒಳ್ಳೇದು ಮಾಡೋಕೆ ಹೋಗ್ತೀನಿ, ಆದ್ರೆ ನನ್ನೊಳಗೆ ಕೆಟ್ಟದೇ ಇದೆ” ಅಂತ ಅಪೊಸ್ತಲ ಪೌಲ ಹೇಳಿದ. (ರೋಮನ್ನರಿಗೆ 7:21) ನಿಮಗೂ ಯಾವತ್ತಾದ್ರೂ ಈ ತರ ಅನಿಸಿದ್ಯಾ? ಹಾಗೆ ಅನಿಸಿದ್ರೆ ತಪ್ಪು ಮಾಡಬೇಕು ಅನ್ನೋ ಒತ್ತಡನ ಜಯಿಸೋಕೆ ಈ ಲೇಖನ ಸಹಾಯ ಮಾಡುತ್ತೆ.

 ನಿಮಗೆ ಏನು ಗೊತ್ತಿರಬೇಕು?

 ತಪ್ಪಾದ ಆಸೆ ಮತ್ತು ಸ್ನೇಹಿತರಿಂದ ಬರೋ ಒತ್ತಡ ಎರಡೂ ನಿಮ್ಮನ್ನ ಎಡವಿಸುತ್ತೆ. ಅದಕ್ಕೆ ಬೈಬಲ್‌ “ಕೆಟ್ಟ ಸಹವಾಸ ಒಳ್ಳೇ ನಡತೆಯನ್ನ ಹಾಳು ಮಾಡುತ್ತೆ” ಅಂತ ಹೇಳುತ್ತೆ. (1 ಕೊರಿಂಥ 15:33) ಸ್ನೇಹಿತರಿಂದ ಬರೋ ಒತ್ತಡ ಮತ್ತು ನಾವು ನೋಡುವ ಟೀವಿ ಕಾರ್ಯಕ್ರಮಗಳು ‘ಉರಿಯೋ ಬೆಂಕಿಗೆ ತುಪ್ಪ ಹಾಕಿದಂತೆ‘ ನಮ್ಮಲ್ಲಿರೋ ಕೆಟ್ಟ ಆಸೆನ ಜಾಸ್ತಿ ಮಾಡುತ್ತೆ. ಅದು ನಮ್ಮ ಮೇಲೆ ಎಷ್ಟು ಪ್ರಭಾವ ಬೀರುತ್ತೆ ಅಂದ್ರೆ ತಪ್ಪು ಮಾಡೋ ತರ ಮಾಡಿಬಿಡುತ್ತೆ. ಅಷ್ಟೇ ಅಲ್ಲ ಕೆಟ್ಟದು ಮಾಡೋರ ‘ಜೊತೆ ಸೇರ್ಕೊಂಡು ನಾವೂ ಕೆಟ್ಟದು‘ ಮಾಡೋ ಸಾಧ್ಯತೆ ಇದೆ.—ವಿಮೋಚನಕಾಂಡ 23:2.

 “ಕೆಲವು ಸಲ ನಾವು ಎಲ್ರೂ ಏನು ಮಾಡ್ತಾರೋ ಅದನ್ನ ಮಾಡಿದ್ರೆ ಜನ ನಮ್ಮನ್ನ ಇಷ್ಟ ಪಡ್ತಾರೆ ಅಂತ, ಹಿಂದೆ ಮುಂದೆ ಯೋಚನೆ ಮಾಡದೆ ಅವ್ರು ಮಾಡೋದನ್ನೆಲ್ಲಾ ಮಾಡಿಬಿಡ್ತೀವಿ.”—ಜೆರೆಮಿ.

 ಸ್ವಲ್ಪ ಯೋಚನೆ ಮಾಡಿ: ಬೇರೆವ್ರು ನಮ್ಮ ಬಗ್ಗೆ ಏನು ಅಂದ್ಕೊತಾರೋ ಅಂತ ಅತಿಯಾಗಿ ಯೋಚ್ನೆ ಮಾಡಿದ್ರೆ, ತಪ್ಪು ಮಾಡಬೇಕು ಅನ್ನೋ ಒತ್ತಡ ಜಾಸ್ತಿ ಆಗುತ್ತೆ. ಯಾಕೆ?—ಜ್ಞಾನೋಕ್ತಿ 29:25.

 ಪಾಠ: ನಿಮ್ಮ ಫ್ರೆಂಡ್ಸ್‌ ಎಷ್ಟೇ ಒತ್ತಡ ಹಾಕಲಿ, ಏನೇ ಹೇಳಲಿ ಯಾವುದು ಸರಿಯಾಗಿರುತ್ತೋ ಅದನ್ನ ಮಾಡಿ, ಬಿಟ್ಟುಕೊಡಬೇಡಿ.

 ನೀವೇನು ಮಾಡಬಹುದು?

 ನಿಮ್ಮ ನಂಬಿಕೆಗಳ ಬಗ್ಗೆ ಚೆನ್ನಾಗಿ ತಿಳ್ಕೊಳ್ಳಿ. ನಿಮ್ಮ ನಂಬಿಕೆಗಳ ಬಗ್ಗೆ ನಿಮ್ಗೇ ಗೊತ್ತಿಲ್ಲ ಅಂದ್ರೆ ನೀವು ಬೇರೆವ್ರ ಕೈಗೊಂಬೆ ಆಗಿಬಿಡ್ತೀರ. ಅದಕ್ಕೆ ಬೈಬಲಿನ ಈ ಮಾತನ್ನ ಮನಸ್ಸಲ್ಲಿಡಿ. “ಎಲ್ಲವನ್ನ ಪರೀಕ್ಷಿಸಿ ಯಾವುದು ಒಳ್ಳೇದು ಅಂತ ಚೆನ್ನಾಗಿ ತಿಳ್ಕೊಳ್ಳಿ, ಅದನ್ನೇ ಯಾವಾಗ್ಲೂ ಮಾಡಿ.” (1 ಥೆಸಲೊನೀಕ 5:21) ನಿಮ್ಮ ನಂಬಿಕೆಗಳ ಬಗ್ಗೆ ಚೆನ್ನಾಗಿ ತಿಳ್ಕೊಂಡಾಗ ಅದೇ ತರ ನಡ್ಕೊಳ್ಳೋಕೆ ನೀವು ಪ್ರಯತ್ನಪಡ್ತೀರ. ಆಗ ತಪ್ಪು ಮಾಡಬೇಕು ಅನ್ನೋ ಒತ್ತಡನ ಸುಲಭವಾಗಿ ಜಯಿಸಬಹುದು.

 ಸ್ವಲ್ಪ ಯೋಚನೆ ಮಾಡಿ: ದೇವರು ನಮ್ಗೆ, ಹೀಗ್‌ ಮಾಡು, ಹೀಗ್‌ ಮಾಡಬೇಡ ಅಂತ ಹೇಳೋದು ನಮ್ಮ ಒಳ್ಳೇದಕ್ಕೆ ಅಂತ ನಾವು ಯಾಕೆ ನಂಬಬೇಕು?

 “ನಾನು ಏನ್‌ ನಂಬಿದ್ದೀನೋ ಅದ್ರ ತರ ನಡ್ಕೊಂಡು ತಪ್ಪು ಮಾಡಬೇಕು ಅನ್ನೋ ಆಸೆಗೆ ಬಲಿಬೀಳದೆ ಇದ್ದಾಗ, ಜನ ನಂಗೆ ಜಾಸ್ತಿ ಗೌರವ ಕೊಡ್ತಾರೆ.”—ಕಿಂಬರ್ಲಿ.

 ಬೈಬಲಿನಲ್ಲಿರೋ ಒಳ್ಳೇ ಮಾದರಿ: ದಾನಿಯೇಲ. ಯುವಕನಾಗಿದ್ದಾಗಲೇ ದಾನಿಯೇಲ ದೇವರ ಆಜ್ಞೆಗಳನ್ನ ಪಾಲಿಸಬೇಕು ಅಂತ “ಮನಸ್ಸಲ್ಲಿ ದೃಢನಿರ್ಧಾರ ಮಾಡಿದ್ದ.”—ದಾನಿಯೇಲ 1:8.

ನಿಮ್ಮ ನಂಬಿಕೆಗಳ ಬಗ್ಗೆ ನಿಮ್ಗೇ ಗೊತ್ತಿಲ್ಲ ಅಂದ್ರೆ ನೀವು ಬೇರೆವ್ರ ಕೈಗೊಂಬೆ ಆಗಿಬಿಡ್ತೀರ

 ನಿಮ್ಮ ವೀಕ್‌ನೆಸ್‌ ಬಗ್ಗೆ ತಿಳ್ಕೊಳ್ಳಿ. ‘ಯೌವನದಲ್ಲಿ ಬರೋ ಆಸೆಗಳ’ ಬಗ್ಗೆ ಬೈಬಲ್‌ ಹೇಳುತ್ತೆ. ಆಸೆಗಳು ಯೌವನದಲ್ಲಿ ಬಲವಾಗಿ ಇರುತ್ತೆ. (2 ತಿಮೊತಿ 2:22) ಆಸೆ ಅಂದಾಗ ಬರೀ ಲೈಂಗಿಕ ಆಸೆಗಳು ಮಾತ್ರ ಅಲ್ಲ, ಎಲ್ಲರೂ ನಮ್ಮನ್ನ ಇಷ್ಟಪಡಬೇಕು ಮತ್ತು ನಾವು ಚಿಕ್ಕವರಾಗಿದ್ರೂ ಯಾರೂ ನಮ್ಮನ್ನ ಕಂಟ್ರೋಲ್‌ ಮಾಡಬಾರದು, ಅಪ್ಪ-ಅಮ್ಮ ಕೂಡ ನಮ್ಗೆ ಏನೂ ಹೇಳಬಾರದು ಅನ್ನೋ ಆಸೆನೂ ಸೇರಿದೆ.

 ಸ್ವಲ್ಪ ಯೋಚನೆ ಮಾಡಿ: “ಒಬ್ಬ ವ್ಯಕ್ತಿಯ ಆಸೆನೇ ಅವನನ್ನ ಎಳ್ಕೊಂಡು ಹೋಗಿ ಪುಸಲಾಯಿಸಿ ಪರೀಕ್ಷೆ ಮಾಡುತ್ತೆ” ಅಂತ ಬೈಬಲ್‌ ಹೇಳುತ್ತೆ. (ಯಾಕೋಬ 1:14) ಯಾವ ಆಸೆಗೆ ನೀವು ತುಂಬಾ ಬೇಗ ಬಲಿಬೀಳ್ತಿರಾ?

 “ಯಾವ ಆಸೆಗೆ ನೀವು ತುಂಬಾ ಬೇಗ ಬಲಿಬೀಳ್ತೀರ ಅಂತ ಯಥಾರ್ಥವಾಗಿ ಸ್ವಪರೀಕ್ಷೆ ಮಾಡ್ಕೊಳ್ಳಿ. ಅದನ್ನ ಹೇಗೆ ಜಯಿಸಬಹುದು ಅಂತ ರಿಸರ್ಚ್‌ ಮಾಡಿ. ಕಲಿತ ಪಾಠಗಳನ್ನ ಬರೆದಿಡಿ. ಹೀಗೆ ಮಾಡೋದ್ರಿಂದ ಇಂಥದ್ದೇ ಸಮಸ್ಯೆ ಮುಂದೆ ಬಂದಾಗ ಏನು ಮಾಡಬೇಕು ಅಂತ ನಿಮ್ಗೆ ಚೆನ್ನಾಗಿ ಗೊತ್ತಿರುತ್ತೆ.”—ಸಿಲ್ವಿಯ.

 ಬೈಬಲಿನಲ್ಲಿರೋ ಒಳ್ಳೇ ಮಾದರಿ: ದಾವೀದ. ಅವನು ತನ್ನಲ್ಲಿದ್ದ ಆಸೆಯಿಂದ ಮತ್ತೆ ಬೇರೆವ್ರ ಒತ್ತಡಕ್ಕೆ ಬಲಿಬಿದ್ದು ತಪ್ಪು ಮಾಡಿದ. ಆದ್ರೆ ಮಾಡಿದ ತಪ್ಪಿಂದ ಪಾಠ ಕಲಿತ, ಅದನ್ನ ಸರಿ ಮಾಡ್ಕೊಂಡ. “ನನ್ನೊಳಗೆ ಶುದ್ಧ ಹೃದಯವನ್ನ ಹುಟ್ಟಿಸು, ಸ್ಥಿರವಾಗಿರೋ ಒಂದು ಹೊಸ ಮನಸ್ಸನ್ನ ನನ್ನೊಳಗೆ ಇಡು” ಅಂತ ಯೆಹೋವ ದೇವ್ರ ಹತ್ರ ಕೇಳ್ಕೊಂಡ.—ಕೀರ್ತನೆ 51:10.

 ಆಸೆಗಳ ಕೈಗೊಂಬೆ ಆಗಬೇಡಿ. “ಕೆಟ್ಟದು ನಿನ್ನನ್ನ ಗೆಲ್ಲೋಕೆ ಬಿಡಬೇಡ” ಅಂತ ಬೈಬಲ್‌ ಹೇಳುತ್ತೆ. (ರೋಮನ್ನರಿಗೆ 12:21) ಆಸೆ ಬಂದ ತಕ್ಷಣ ಅದಕ್ಕೆ ಬಲಿಬೀಳಬೇಕು ಅಂತೇನಿಲ್ಲ. ಯಾಕಂದ್ರೆ ಆ ಆಸೆನ ಕಂಟ್ರೋಲ್‌ ಮಾಡೋದು ಬಿಡೋದು ನಮ್ಮ ಕೈಲಿದೆ.

 ಸ್ವಲ್ಪ ಯೋಚನೆ ಮಾಡಿ: ತಪ್ಪು ಮಾಡೋ ಒತ್ತಡ ಬಂದ್ರೂ ಆಸೆಗಳ ಕೈಗೊಂಬೆ ಆಗದೇ ಸರಿಯಾದ ನಿರ್ಧಾರನ ನೀವು ಹೇಗೆ ಮಾಡಬಹುದು?

 “ನನ್ನ ಆಸೆಗೆ ಬಲಿಬಿದ್ರೆ ಅದ್ರಿಂದ ಏನೆಲ್ಲಾ ಪರಿಣಾಮ ಆಗುತ್ತೆ ಅನ್ನೋದ್ರ ಬಗ್ಗೆ ನಾನು ಮೊದ್ಲೇ ಯೋಚ್ನೆ ಮಾಡ್ತೀನಿ. ಆ ಆಸೆ ಪ್ರಕಾರ ನಡ್ಕೊಂಡ್ರೆ ಆ ಕ್ಷಣಕ್ಕಷ್ಟೇ ಸಂತೋಷ ಆಗುತ್ತಾ? ಶಾಶ್ವತವಾಗಿ ಸಂತೋಷ ಸಿಗುತ್ತಾ? ಅಥ್ವಾ ‘ಛೇ ಹಾಗೆ ಮಾಡಬಾರದಿತ್ತು‘ ಅಂತ ಅನ್ಸುತ್ತಾ? ಮನಸ್ಸು ಚುಚ್ಚುತ್ತಾ? ಆ ರೀತಿ ಚುಚ್ಚೋದಾದ್ರೆ ಆ ಕೆಲ್ಸ ಮಾಡದೇ ಇರೋದೇ ಒಳ್ಳೇದು.”—ಸೋಫಿಯ.

 ಬೈಬಲಿನಲ್ಲಿರೋ ಒಳ್ಳೇ ಮಾದರಿ: ಪೌಲ. ತನ್ನಲ್ಲಿ ತಪ್ಪಾದ ಆಸೆಗಳಿದ್ರು ಅದನ್ನ ನಾನು ಹತೋಟಿಯಲ್ಲಿ ಇಟ್ಕೊಂಡಿದ್ದೆ ಅಂತ ಪೌಲ ಹೇಳಿದ. ‘ನನ್ನ ದೇಹವನ್ನ ತುಂಬ ಕಟ್ಟುನಿಟ್ಟಾಗಿಟ್ಟುಕೊಂಡು ದಾಸನ ತರ ಮಾಡ್ಕೊಳ್ತೀನಿ.‘—1 ಕೊರಿಂಥ 9:27, ಪಾದಟಿಪ್ಪಣಿ.

 ಪಾಠ: ಡ್ರೈವರ್‌ ಸೀಟ್‌ನಲ್ಲಿ ಕೂತಾಗ ಕಾರಿನ ಕಂಟ್ರೋಲ್‌ ಪೂರ್ತಿ ಆ ಡ್ರೈವರ್‌ ಕೈಲಿರುತ್ತೆ. ಅದೇ ತರ ತಪ್ಪು ಮಾಡೋ ಒತ್ತಡ ಬಂದಾಗ ಅದನ್ನ ಕಂಟ್ರೋಲ್‌ ಮಾಡೋದೂ ನಿಮ್ಮ ಕೈಲಿರುತ್ತೆ.

 ಆಸೆಗಳು ಕ್ಷಣಿಕ ಅನ್ನೋದನ್ನ ಯಾವತ್ತೂ ಮರೀಬೇಡಿ. ಅದನ್ನೇ 20 ವಯಸ್ಸಿನ ಮೆಲಿಸ್ಸಾ ಹೇಳ್ತಾಳೆ, “ನಾನು ಹೈಸ್ಕೂಲ್‌ನಲ್ಲಿದ್ದಾಗ ಕೆಲವು ಒತ್ತಡ ಬಂದಾಗ ಆಕಾಶನೇ ತಲೆ ಮೇಲೆ ಬಿದ್ದ ತರ ಆಡ್ತಿದ್ದೆ. ಆದ್ರೆ ಈಗ ಅದ್ರ ಬಗ್ಗೆ ನೆನಸಿಕೊಂಡ್ರೆ ಅದೇನೂ ತಲೆಕೆಡಿಸಿಕೊಳ್ಳೋಷ್ಟು ದೊಡ್ಡ ವಿಷ್ಯನೇ ಅಲ್ಲ ಅಂತ ಅನ್ಸುತ್ತೆ. ಈಗ ಬರೋ ಒತ್ತಡಗಳು ಅಷ್ಟೇ. ಈ ಕ್ಷಣಕ್ಕೆ ದೊಡ್ಡದಾಗಿ ಕಾಣುತ್ತೆ, ಸಮಯ ಹೋದ ಹಾಗೆ ಏನೇನೂ ಅಲ್ಲ ಅಂತ ಅನಿಸಿಬಿಡುತ್ತೆ. ಆದ್ರೆ ಸರಿಯಾದ ನಿರ್ಧಾರ ಮಾಡಿದ್ರೆ, ಹಿಂದೆ ತಿರುಗಿ ನಮ್ಮ ಲೈಫ್‌ ನೋಡಿದಾಗ ಸರಿಯಾಗಿರೋದನ್ನೇ ಮಾಡಿದ್ದೀವಿ ಅನ್ನೋ ನೆಮ್ಮದಿ ಇರುತ್ತೆ.”