ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ಬೋರಾದ್ರೆ ನಾನೇನು ಮಾಡ್ಲಿ?

ಬೋರಾದ್ರೆ ನಾನೇನು ಮಾಡ್ಲಿ?

 ಮನೆಯಲ್ಲಿರೋವಾಗ ಮಳೆಬಂದು ಎಲ್ಲೂ ಹೋಗಕ್ಕೆ ಆಗಲ್ಲ ಅಥವಾ ಏನು ಮಾಡಕ್ಕೂ ಆಗಲ್ಲ ಅಂದ್ರೆ ತುಂಬ ಬೋರಾಗುತ್ತೆ ಅಂತ ಕೆಲವರು ಹೇಳ್ತಾರೆ. “ಕೆಲವೊಮ್ಮೆ ನಂಗೂ ಹಾಗೇ ಅನ್ಸುತ್ತೆ, ಏನ್‌ ಮಾಡಕ್ಕೂ ಆಗದೆ ಬೇಜಾರಾಗುತ್ತೆ” ಅಂತ ಯುವ ರಾಬರ್ಟ್‌ ಹೇಳ್ತಾನೆ.

 ನಿಮಗೂ ಯಾವಾಗಾದ್ರು ಹಾಗೆ ಅನಿಸಿದೆಯಾ? ಹಾಗಿದ್ರೆ ಈ ಲೇಖನ ನಿಮಗೆ ಸಹಾಯ ಮಾಡುತ್ತೆ.

 ನಿಮಗೆ ಏನು ಗೊತ್ತಿರಬೇಕು

  •   ತಂತ್ರಜ್ಞಾನದಿಂದ ಸಹಾಯ ಸಿಗಲ್ಲ.

     ಇಂಟರ್ನೆಟ್‌ ನಿಂದ ಟೈಂ ಪಾಸ್‌ ಆಗಬಹುದು, ಆದ್ರೆ ಹೊಸ ಹೊಸ ವಿಷಯಗಳನ್ನು ಮಾಡಬೇಕು ಅನ್ನೊ ಆಸಕ್ತಿಯನ್ನು ಕಳೆದುಕೊಳ್ಳುತ್ತೀರಿ ಮತ್ತು ನಿಮಗೆ ಹೆಚ್ಚು ಬೋರ್‌ ಆಗಬಹುದು. ಇದರ ಬಗ್ಗೆ 21 ವಯಸ್ಸಿನ ಜೆರೆಮಿ ಹೇಳೋದು “ಇದು ನೀವು ಏನೂ ಯೋಚನೆ ಮಾಡದೇ ಸುಮ್ಮನೆ ಕಂಪ್ಯೂಟರ್‌ ನೋಡ್ತಾ ಇರೋ ತರ ಇರುತ್ತೆ.”

     ಇನ್ನೊಬ್ಬ ಯುವತಿ ಎಲೇನ ಹೀಗೆ ಹೇಳ್ತಾರೆ. “ತಂತ್ರಜ್ಞಾನದಿಂದ ಎಲ್ಲಾ ಸಾಧಿಸೋಕೆ ಆಗಲ್ಲ, ಅದು ನಿಮ್ಮನ್ನ ಕಲ್ಪನಾಲೋಕಕ್ಕೆ ಕರ್ಕೊಂಡು ಹೋಗುತ್ತೆ, ಆಮೇಲೆ ಮತ್ತೆ ನಿಮಗೆ ಜಾಸ್ತಿ ಬೋರ್‌ ಆಗುತ್ತೆ.”

  •   ನಿಮ್ಮ ಯೋಚನೆಯಿಂದ ಸಹಾಯ ಸಿಗುತ್ತೆ.

     ನನಗೆ ಬೋರ್‌ ಆಗ್ತಿದೆ ಅಂತ ಯೋಚ್ನೆ ಮಾಡೋದ್ರಿಂದ ಎಲ್ಲಾ ಸರಿಹೋಗಲ್ಲ. ಬದಲಿಗೆ ನಿಮಗಿರೋ ಕೆಲಸದಲ್ಲಿ ಹೇಗೆ ಆಸಕ್ತಿ ತೋರಿಸಬಹುದು ಅಂತ ಯೋಚನೆ ಮಾಡುವಾಗ ಸಹಾಯ ಸಿಗುತ್ತೆ. ಉದಾಹರಣೆಗೆ ಯುವ ಕೇರನ್‌ ಹೇಳೋದನ್ನು ಗಮನಿಸಿ “ಇಡೀ ದಿನ ಸ್ಕೂಲಲ್ಲಿ ಇರುವಾಗ ಕೆಲವೊಮ್ಮೆ ನನಗೆ ಬೋರಾಗ್ತಿತ್ತು ಯಾಕೆಂದ್ರೆ ನಾನು ಪಾಠದ ಮೇಲೆ ಹೆಚ್ಚು ಆಸಕ್ತಿ ತೋರಿಸ್ತಿರ್ಲಿಲ್ಲ. ಹಾಗಾಗಿ ನಾವು ಏನು ಮಾಡ್ತಿದ್ದೇವೆ, ಎಷ್ಟು ಆಸಕ್ತಿ ತೋರಿಸ್ತೇವೆ ಅನ್ನೋದು ತುಂಬ ಮುಖ್ಯ.”

 ನಿಮಗಿದು ಗೊತ್ತಾ? “ಮಾಡೋಕೆ ಏನೂ ಕೆಲ್ಸ ಇಲ್ಲ” ಅಂದ್ರೆ, ಕೆಲ್ಸ ಮಾಡೋಕೆ ನಿಮಗೆ ಅವಕಾಶವಿದೆ ಅಂತ ಅರ್ಥ. ಅವಕಾಶ ಅನ್ನೋ ಹಸಿ ಮಣ್ಣನ್ನು ಸರಿಯಾಗಿ ಬಳಸಿದ್ರೆ, ಹೊಸತೇನಾದ್ರು ಮಾಡ್ಬೇಕು ಅನ್ನೋ ಬೀಜ ಮೊಳಕೆ ಒಡೆಯುತ್ತೆ.

ಸಮಯ ಹಸಿ ಮಣ್ಣು ಇದ್ದಂಗೆ, ಅದನ್ನು ಸರಿಯಾಗಿ ಬಳಸಿದ್ರೆ, ಹೊಸತೇನಾದ್ರು ಮಾಡ್ಬೇಕು ಅನ್ನೋ ಬೀಜ ಮೊಳಕೆ ಒಡೆಯುತ್ತೆ.

 ನೀವೇನು ಮಾಡಬಹುದು

 ವಿಶಾಲ ಮನಸ್ಸನ್ನು ಬೆಳೆಸಿಕೊಳ್ಳಿ. ಹೊಸ ಸ್ನೇಹಿತರನ್ನು ಮಾಡಿಕೊಳ್ಳಿ. ಒಂದೊಳ್ಳೆ ಹವ್ಯಾಸ ಬೆಳೆಸಿಕೊಳ್ಳಿ. ಹೊಸ ವಿಷಯಗಳ ಬಗ್ಗೆ ಸಂಶೋಧನೆ ಮಾಡಿ. ಯಾವಾಗ್ಲೂ ಒಂದೇ ವಿಷಯ ಮಾಡೋದಕ್ಕಿಂತ ಬೇರೆ ಬೇರೆ ವಿಷಯಗಳ ಮೇಲೆ ಆಸಕ್ತಿ ಇರೋರಿಗೆ ಸಾಮಾನ್ಯವಾಗಿ ಒಬ್ರೇ ಇದ್ದೀವಿ ಅಂತ ಬೋರ್‌ ಆಗಲ್ಲ. ಅಂಥವರಿಂದ ಬೇರೆಯವರಿಗೂ ಬೋರ್‌ ಅನ್ಸಲ್ಲ.

 ಬೈಬಲಿನ ಸಲಹೆ: “ನಿನ್ನ ಕೈಯಿಂದ ಆಗೋ ಕೆಲಸನೆಲ್ಲ ನಿನ್ನ ಪೂರ್ಣ ಶಕ್ತಿಯಿಂದ ಮಾಡು.”—ಪ್ರಸಂಗಿ 9:10.

 “ಇತ್ತೀಚೆಗೆ ನಾನು ಮ್ಯಾಂಡರೀನ್‌ ಚೈನೀಸ್‌ ಭಾಷೆಯನ್ನು ಕಲಿತ್ತಿದ್ದೀನಿ ಅದನ್ನ ಪ್ರತಿದಿನ ಮಾತಾಡೋಕೆ ಅಭ್ಯಾಸ ಮಾಡ್ತೀದ್ದೀನಿ, ಈ ರೀತಿ ಹೊಸದೇನಾದ್ರು ಮಾಡಿ ತುಂಬ ವರ್ಷಗಳಾಗಿತ್ತು. ಈಗ ಇದನ್ನು ಮಾಡ್ತಿರೋದ್ರಿಂದ ನನಗೆ ಬೋರ್‌ ಆಗ್ತಿಲ್ಲ, ಈ ಪ್ರಾಜೆಕ್ಟ್‌ ಅನ್ನು ಮಾಡ್ತಾ ಅದ್ರ ಬಗ್ಗೆನೇ ಯೋಚಿಸ್ತಾ ಇರೋದ್ರಿಂದ ನನ್ನ ಸಮಯವನ್ನು ಸರಿಯಾಗಿ ಬಳಸ್ತಿದ್ದೀನಿ ಅಂತ ಅನ್ಸುತ್ತೆ.”ಮೆಲಿಂಡ.

 ಗುರಿಯ ಮೇಲೆ ಗಮನವಿಡಿ. ನೀವು ಯಾಕೆ ಈ ಕೆಲಸ ಮಾಡ್ತಿದ್ದೀರ ಅಂತ ತಿಳ್ಕೊಳಿ. ಇದರಿಂದ ನಿಮ್ಮ ಆಸಕ್ತಿ ಹೆಚ್ಚಾಗುತ್ತೆ. ಉದಾಹರಣೆಗೆ, ನಿಮ್ಮ ಸ್ಕೂಲಲ್ಲಿ ಕೊಡೋ ಹೋಮ್‌ ವರ್ಕ್‌ ಯಾಕೆ ಕೊಟ್ಟಿದ್ದಾರೆಂದು ತಿಳ್ಕೊಂಡ್ರೆ ಅದನ್ನ ಮಾಡೋಕೆ ನಿಮಗೆ ಬೋರ್‌ ಆಗಲ್ಲ.

 ಬೈಬಲಿನ ಸಲಹೆ: “ಕಷ್ಟಪಟ್ಟು ಕೆಲಸ ಮಾಡೋದ್ರಲ್ಲಿ ಸಂತೋಷ ಪಡಿಯೋದು, ಇದಕ್ಕಿಂತ ಒಳ್ಳೇದು ಮನುಷ್ಯನಿಗೆ ಬೇರೆ ಯಾವುದೂ ಇಲ್ಲ.”—ಪ್ರಸಂಗಿ 2:24.

 “ನಾನು ಎಕ್ಸಾಮ್‌ ಗೆ ಮುಂಚೆ ಪೂರ್ತಿಯಾಗಿ ಓದಿ ಮುಗಿಸ್ಬೇಕು ಅಂತ ಪ್ರತಿದಿನ 8 ತಾಸು ಓದ್ತಿದ್ದೆ. ಗ್ರ್ಯಾಜುಯೇಷನ್‌ ಮುಗಿಸ್ಬೇಕು ಅನ್ನೋದೇ ನನ್ನ ಮನ್ಸಲ್ಲಿ ಇದ್ದಿದ್ರಿಂದ, ಓದ್ತಿದ್ದಾಗ ನನಗೆ ಬೋರ್‌ ಆಗ್ತಿರ್ಲಿಲ್ಲ. ಇನ್ನೂ ಜಾಸ್ತಿ ಓದ್ಬೇಕು ಅಂತ ಅನಿಸ್ತಿತ್ತು.”ಆ್ಯನ

 ಕೆಲ್ವು ವಿಷ್ಯ ನಮ್ಮ ಕೈಲಿಲ್ಲ ಅಂತ ಒಪ್ಕೊಳ್ಳಿ. ಮೊದಲ ಸಲ ಒಂದು ಕೆಲ್ಸ ಮಾಡಿದಾಗ ನೀವು ಅದನ್ನ ತುಂಬ ಆಸಕ್ತಿಯಿಂದ ಮಾಡಿರಬಹುದು. ಆದ್ರೆ ಸ್ವಲ್ಪ ಸಮಯವಾದ ಮೇಲೆ ಆ ಕೆಲಸ ನಿಮಗೆ ಬೋರಾಗಬಹುದು. ಅಷ್ಟೇ ಅಲ್ಲ ಕೆಲವೊಮ್ಮೆ ನೀವು ಮಾಡಿದ್ದ ಪ್ಲಾನ್‌ ಅನ್ನು ನಿಮ್ಮ ಸ್ನೇಹಿತರು ಕ್ಯಾನ್ಸಲ್‌ ಮಾಡ್ದಾಗ ನಿಮ್ಮ ಸಮಯ ಹಾಳಾಗಬಹುದು. ಇದರಿಂದ ಬೇಜಾರಾಗೋ ಬದಲು, ಆಗ ಬೇರೆ ಏನ್‌ ಮಾಡಕ್ಕಾಗುತ್ತೋ ಅದನ್ನ ಯೋಚಿಸಿ.

 ಬೈಬಲಿನ ಸಲಹೆ: “ದುಃಖದಲ್ಲಿ ಇರುವವನಿಗೆ ಜೀವನ ಯಾವಾಗ್ಲೂ ಜಿಗುಪ್ಸೆ, ಸಂತೋಷದ ಹೃದಯ ಇರುವವನಿಗೆ ದಿನಾಲೂ ಔತಣ.”—ಜ್ಞಾನೋಕ್ತಿ 15:15.

 “ಏಕಾಂತತೆಯನ್ನು ಆನಂದಿಸೋಕೆ ಕಲಿ ಅಂತ ನನ್ನ ಫ್ರೆಂಡ್‌ ಹೇಳಿದ್ಲು. ಎಲ್ಲರ ಜೊತೆಗೆ ಇರುವಾಗ ಮಾತ್ರ ಅಲ್ಲ ಒಬ್ರೇ ಇರೋವಾಗ್ಲೂ ಸಂತೋಷವಾಗಿರೋಕೆ ಕಲಿಯೋದು ಒಳ್ಳೇದು, ಇದು ಜೀವನದಲ್ಲಿ ತುಂಬ ಮುಖ್ಯ.”ಐವಿ